ಕ್ರಿಕೆಟ್

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ವಿಶಿಷ್ಠ ದಾಖಲೆ ಬರೆದ ಪಿಯೂಷ್ ಚಾವ್ಲಾ 

Nagaraja AB

ನವದೆಹಲಿ: ಪಿಯೂಷ್‌ ಚಾವ್ಲಾ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಆಡಿದ ಚೊಚ್ಚಲ ಪಂದ್ಯದಲ್ಲಿ ಐಪಿಎಲ್‌ ಟೂರ್ನಿಯಲ್ಲಿ ವಿಶಿಷ್ಠ ದಾಖಲೆಯೊಂದನ್ನು ಮಾಡಿದರು. 

ಕಳೆದ 12 ವರ್ಷಗಳಿಂದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ತಾವು ಯಶಸ್ವಿ ಸ್ಪಿನ್ನರ್‌ ಎಂಬುದನ್ನು ಮೊದಲನೇ ಓವರ್‌ನಲ್ಲಿಯೇ ಅವರು ಸಾಬೀತುಪಡಿಸಿದರು.

ಪಿಯೂಷ್‌ ಚಾವ್ಲಾ ಬೌಲಿಂಗ್‌ ಮಾಡುವ ಹೊತ್ತಿನಲ್ಲಿ ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್‌ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಈ ಜೋಡಿ ದೀಪಕ್‌ ಚಹರ್‌, ಸ್ಯಾಮ್‌ ಕರನ್‌ ಹಾಗೂ ಎನ್‌ ಲುಂಗಿಡಿ ಅವರ ಮೊದಲ ನಾಲ್ಕು ಓವರ್‌ಗಳಿಗೆ 45 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿತ್ತು. ಈ ವೇಳೆ ಎಚ್ಚೆತ್ತುಕೊಂಡ ಎಂಎಸ್‌ ಧೋನಿ, ಪಿಯೂಷ್‌ ಚಾವ್ಲಾ ಮೊರೆ ಹೋದರು. ಅದರಂತೆ ಧೋನಿ ಐಡಿಯಾ ತಕ್ಷಣ ಈಡೇರಿತು.  

ಅತ್ಯುತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ರೋಹಿತ್‌ ಶರ್ಮಾ, ಪಿಯೂಷ್‌ ಚಾವ್ಲಾ ಎಸೆತದಲ್ಲಿ ಮಿಡ್‌ ಅಪ್‌ನಲ್ಲಿ  ತಲೆ ಮೇಲೆ ಹೊಡೆಯಲು ಪ್ರಯತ್ನಿಸಿ ಸುಲಭವಾದ ಕ್ಯಾಚ್‌ ನೀಡಿ ನಿರಾಸೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. 

ಮುಂಬೈ ಇಂಡಿಯನ್ಸ್‌ ನಾಯಕನ ವಿಕೆಟ್‌ ಪಡೆಯುತ್ತಿದ್ದಂತೆ ಐಪಿಎಲ್‌ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಗೆ ಪಿಯೂಷ್‌ ಚಾವ್ಲಾ ಭಾಜನರಾದರು. ಆ ಮೂಲಕ 150 ವಿಕೆಟ್‌ಗಳನ್ನು ಪಡೆದಿರುವ ಹರಭಜನ್‌ ಸಿಂಗ್‌(150) ಅವರ ದಾಖಲೆಯನ್ನು ಹಿಂದಿಕ್ಕಿದರು. 

SCROLL FOR NEXT