ಕ್ರಿಕೆಟ್

ಚಿಯರ್ಸ್ ಒನ್ಸ್ ಎಗೈನ್ ಮೈ ಫ್ರೆಂಡ್: ಕನ್ನಡಿಗ ಮಯಾಂಕ್ ಆಟಕ್ಕೆ ಕಿಚ್ಚನ ಮೆಚ್ಚುಗೆ

Raghavendra Adiga

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರಿಕೆಟ್ ಅಭಿಮಾನಿ ಎನ್ನುವುದು ಎಲ್ಲರಿಗೆ ತಿಳಿದ ಸಂಗತಿ.  ಇದೀಗ ಅವರು ನಿನ್ನೆ ನಡೆದಿದ್ದ ಐಪಿಎಲ್ ಎರಡನೇ ದಿನದ ಪಂದ್ಯದಲ್ಲಿ ಪಂಜಾಬ್ ಪರ ಬ್ಯಾಟ್ ಬೀಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಟಕ್ಕೆ ಶಹಬಾಸ್ ಎಂದಿದ್ದಾರೆ.

ಭಾನುವಾರ ನಡೆದ ಡೆಲ್ಲಿಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಮಯಾಂಕ್ 89 ರನ್ (60 ಎಸೆತ, 7 ಬೌಂಡರಿ, 4 ಸಿಕ್ಸರ್ ಗಳಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು. ಸೂಪರ್ ಓವರ್ ನಲ್ಲಿ ಪಂಜಾಬ್ ಸೋಲುಂಡರೂ ಸಹ ಮಯಾಕ್ ಅವರ ಅದ್ಭುತ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿತ್ತು.

ಈ ಸಂಬಂಧ ಟ್ವೀಟ್ ಮಾಡಿದ ಕಿಚ್ಚ ಸುದೀಪ್ "ಉತ್ತಮ ಪ್ರದರ್ಶನ ನೀಡಿದ ಮಯಾಂಗ್ ಅಗರ್ವಾಲ್ ಬಗೆಗೆ ಹೆಮ್ಮೆ ಇದೆ. ಮೂರ್ ಸೂಪರ್ ಓವರ್ ಗಳಲ್ಲಿ ನೀವಿಲ್ಲದಿದ್ದರೂ  ಕೋವಿಡ್ ಮತ್ತಿತರೆ ಸಮಸ್ಯೆಗಳ ನಡುವೆ ನಿಮ್ಮ ಆಟ ಅತ್ಯುತ್ತಮ ಮನರಂಜನೆ ನೀಡಿತು. ಚಿಯರ್ಸ್ ಒನ್ಸ್ ಎಗೈನ್ ಮೈ ಫ್ರೆಂಡ್" ಎಂದಿದ್ದಾರೆ.

SCROLL FOR NEXT