ಚಹಲ್-ಡಿವಿಲಿಯರ್ಸ್ 
ಕ್ರಿಕೆಟ್

ಪಂದ್ಯಕ್ಕೆ ತಿರುವು ಕೊಟ್ಟ ವಿಜಯ್‌ ಶಂಕರ್ ವಿಕೆಟ್‌ ಪಡೆಯಲು ಎಬಿಡಿ ನೀಡಿದ ಸಲಹೆ ಬಹಿರಂಗಪಡಿಸಿದ ಚಹಲ್‌

ದೇವದತ್‌ ಪಡಿಕ್ಕಲ್‌ ಚೊಚ್ಚಲ ಅರ್ಧಶತಕ ಹಾಗೂ ಯಜ್ವೇಂದ್ರ ಚಹಲ್‌ ಸ್ಪಿನ್‌ ಮೋಡಿಯ ನೆರವಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ತನ್ನ ಮೊದಲನೇ ಹಣಾಹಣಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿತು.

ನವದೆಹಲಿ: ದೇವದತ್‌ ಪಡಿಕ್ಕಲ್‌ ಚೊಚ್ಚಲ ಅರ್ಧಶತಕ ಹಾಗೂ ಯಜ್ವೇಂದ್ರ ಚಹಲ್‌ ಸ್ಪಿನ್‌ ಮೋಡಿಯ ನೆರವಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ತನ್ನ ಮೊದಲನೇ ಹಣಾಹಣಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿತು.

ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲಿಯೇ ಕರ್ನಾಟಕದ ದೇವದತ್ ಪಡಿಕ್ಕಲ್‌ ನಿರೀಕ್ಷೆಗೂ ಮೀರಿ ಬ್ಯಾಟಿಂಗ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಚೊಚ್ಚಲ ಅರ್ಧಶತಕ ಸಿಡಿಸಿದ ಆರ್‌ಸಿಬಿ ಓಪನರ್‌, ವಿರಾಟ್‌ ಕೊಹ್ಲಿಯ ಆತ್ಮ ವಿಶ್ವಾಸವನ್ನು ವೃದ್ದಿಸಿದರು. ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್‌ 42 ಎಸೆತಗಳಲ್ಲಿ 56 ರನ್‌ ಗಳಿಸಿದರು. ಅಲ್ಲದೆ, ಆರೋನ್‌ ಫಿಂಚ್‌ ಅವರ ಜತೆಗೆ ಮೊದಲನೇ ವಿಕೆಟ್‌ಗೆ 90 ರನ್‌ಗಳಿಸಿ ತಂಡಕ್ಕೆ ಉತ್ತಮ ಆರಂಭ ನಿಡಿದ್ದರು. 

ನಂತರ, 164 ರನ್‌ಗಳ ಗುರಿ ಬೆನ್ನತ್ತಿದ್ದ ಸನ್‌ ರೈಸರ್ಸ್ ಹೈದರಾಬಾದ್‌ ತಂಡ ನಾಯಕ ಹಾಗೂ ಸ್ಟಾರ್‌ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರನ್ನು ಬೇಗ ಕಳೆದುಕೊಂಡರೂ, ಜಾನಿ ಬೈರ್‌ಸ್ಟೋವ್‌ ತಂಡಕ್ಕೆ ಆಸರೆಯಾದರು. 

ಆರ್‌ಸಿಬಿಯ ಉಮೇಶ್‌ ಯಾದವ, ಡೇಲ್‌ ಸ್ಟೇನ್‌ ಅವರ ಬೌಲಿಂಗ್‌ನಲ್ಲಿ ಜಾನಿ ಬೈರ್‌ಸ್ಟೋವ್‌ ಹಾಗೂ ಮನೀಶ್‌ ಪಾಂಡೆ ಅರ್ಭಟಿಸಿದರು. ಆದರೆ, ಯಜ್ವೇಂದ್ರ ಚಹಲ್‌ ಬೌಲಿಂಗ್‌ನಲ್ಲಿ ನಿರ್ಣಾಯಕ ಪ್ರದರ್ಶನ ತೋರಿದ್ದರಿ ಸನ್‌ ರೈಸರ್ಸ್ ಹೈದರಾಬಾದ್‌ ತಂಡ ಕೇವಲ 32 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ವಾರ್ನರ್‌ ಪಡೆ 153 ರನ್‌ಗಳಿಗೆ ಆಲವಟ್‌ ಆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

ಮಂಗಳೂರು: KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು; Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

SCROLL FOR NEXT