ಕ್ರಿಕೆಟ್

ಅವಕಾಶ ಇದ್ದರೂ ರನ್ಔಟ್ ಮಾಡದ ಅಂಡ್ರೆ ರಸೆಲ್; ಶಾಕ್ ಆಗಿ ನೋಡಿದ ಕೊಹ್ಲಿ, ವಿಡಿಯೋ ವೈರಲ್!

Vishwanath S

ಚೆನ್ನೈ: 2021ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಅದ್ಭುತ ಪ್ರದರ್ಶನ ನೀಡುತ್ತಿದ್ದು ಸತತ ಮೂರನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 

ಇನ್ನು ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 38 ರನ್ ಗಳಿಂದ ಗೆಲುವು ಸಾಧಿಸಿತ್ತು. ಆರ್ ಸಿಬಿ ಆಟಗಾರರಾದ ಗ್ಲೇನ್ ಮ್ಯಾಕ್ಸ್ ವೇಲ್ ಮತ್ತು ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ತಂಡದ 204 ರನ್ ಬೃಹತ್ ಮೊತ್ತ ಕಲೆಹಾಕಿತ್ತು. 

ಆರ್ ಸಿಬಿ ನೀಡಿದ 205 ರನ್ ಗಳ ಗುರಿ ಬೆನ್ನಟ್ಟಿದ ಕೆಕೆಆರ್ 166 ರನ್ ಮಾತ್ರ ಗಳಿಸಿ 38 ರನ್ ಗಳಿಂದ ಆರ್ ಸಿಬಿಗೆ ಶರಣಾಗಿತ್ತು. 

ಪಂದ್ಯದ ಕೊನೆಯ ಓವರ್ ನ 5ನೇ ಎಸೆತದಲ್ಲಿ ಅಂಡ್ರೆ ರಸೆಲ್ ಗೆ ಅವಕಾಶ ವಿದ್ದರೂ ಜಾಮಿಸನ್ ರನ್ನು ರನ್ ಔಟ್ ಮಾಡಲಿಲ್ಲ. ಪೆವಿಲಿಯನ್ ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮಾತ್ರ ಶಾಕ್ ಆಗಿ ನೋಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ರಸೆಲ್ ಅವರು ಜಾಮಿಸನ್ ರನ್ ಔಟ್ ಮಾಡದೆ ಇರುವುದಕ್ಕೂ ಕಾರಣವಿದೆ. ಯಾಕೆಂದರೆ ಸ್ಟ್ರೈಕ್ ನಲ್ಲಿ ಎಬಿ ಡಿವಿಲಿಯರ್ಸ್ ಆಡುತ್ತಿದ್ದು ನಾನ್ ಸ್ಟ್ರೈಕ್ ನಲ್ಲಿ ಜಾಮಿಸನ್ ಇದ್ದರೂ. ಇನ್ನು ರನ್ ಔಟ್ ಮಾಡಿದರೂ ಬೇರೆ ಆಟಗಾರ ಬಂದು ನಾನ್ ಸ್ಟ್ರೇಕ್ ನಲ್ಲಿ ನಿಲ್ಲುತ್ತಾರೆ. ಇದರಿಂದ ತಂಡಕ್ಕೆ ಯಾವುದೇ ಉಪಯೋಗವಿಲ್ಲ ಎಂಬ ಕಾರಣಕ್ಕೆ ರಸೆಲ್ ಔಟ್ ಮಾಡರೆ ಓವರ್ ಮುಗಿಸಿದ್ದಾರೆ. 

SCROLL FOR NEXT