ನಿಕೋಲಸ್ ಪೂರನ್ 
ಕ್ರಿಕೆಟ್

ಕೋವಿಡ್ ಸಂಕಷ್ಟಕ್ಕೆ ಮಿಡಿದ ಕ್ರಿಕೆಟಿಗ: ಐಪಿಎಲ್ ವೇತನದ ಒಂದು ಭಾಗ ದೇಣಿಗೆ ನೀಡಿದ ಪೂರನ್

ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಪಂಜಾಬ್​ ತಂಡದ ಬ್ಯಾಟ್ಸ್​ಮನ್​ ನಿಕೂಲಸ್ ಪೂರನ್ ಅವರು ಐಪಿಎಲ್ ನಲ್ಲಿನ ತಮ್ಮ ವೇತನದ ಒಂದು ಭಾಗವನ್ನು ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ನೀಡಲು ಮುಂದಾಗಿದ್ದಾರೆ.

ನವದೆಹಲಿ: ಕೊರೋನಾವೈರಸ್ ವಿರುದ್ಧ ಭಾರತ ಸತತ ಹೋರಾಟ ನಡೆಸುತ್ತಿದ್ದು ಇದಕ್ಕಾಗಿ ಅಂತರಾಷ್ಟ್ರೀಯ ವಲಯದಿಂದ ದೇಶಕ್ಕೆ ಸಾಕಷ್ಟು ದೊಡ್ಡ ಮಟ್ಟದ ಸಹಾಯ ದೊರಕುತ್ತಿದೆ. ಇದೇ ಹಾದಿಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಪಂಜಾಬ್​ ತಂಡದ ಬ್ಯಾಟ್ಸ್​ಮನ್​ ನಿಕೂಲಸ್ ಪೂರನ್ ಸಹ ಇದ್ದು ಅವರು ಐಪಿಎಲ್ ನಲ್ಲಿನ ತಮ್ಮ ವೇತನದ ಒಂದು ಭಾಗವನ್ನು ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ದೇಣಿಗೆ ನೀಡಲು ಮುಂದಾಗಿದ್ದಾರೆ.

ಅಷ್ಟೇ ಅಲ್ಲದೆ ಇತರರೂ ಸಹ ಇದೇ ಬಗೆಯಲ್ಲಿ ನೆರವಾಗುವಂತೆ ಪೂರನ್ ಮನವಿ ಮಾಡಿದ್ದಾರೆ. ಅವರು ಈ ಕುರಿತಂತೆ ವಿಡಿಯೋ ಒಂದನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ.

"ನಿಮಗೆ ಲಸಿಕೆ ಪಡೆಯಲು ಸಾಧ್ಯವಾದರೆ ದಯವಿಟ್ಟು ಪಡೆದುಕೊಳ್ಳಿ. , ನಾನು ಭಾರತಕ್ಕಾಗಿ ಪ್ರಾರ್ಥಿಸುವುದನ್ನು ಮುಂದುವರೆಸುತ್ತಿದ್ದೇನೆ ಆದರೆ ಅದು ಮಾತ್ರವಲ್ಲ, ನನ್ನ ಐಪಿಎಲ್ ವೇತನದ ಒಂದು ಭಾಗವನ್ನು ಈ ಬಿಕ್ಕಟ್ಟಿನ ಸಮಯದಲ್ಲಿ ದೇಣಿಗೆ ನೀಡಲು  ನಾನು ಬಯಸುತ್ತೇನೆ" ಎಂದು ಪೂರನ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಐಪಿಎಲ್ 2021 ರಲ್ಲಿ ಇಲ್ಲಿಯವರೆಗೆ ಪಿಬಿಕೆಎಸ್ ಪರ ಎಲ್ಲಾ ಆರು ಪಂದ್ಯಗಳನ್ನು ಆಡಿದ ಪೂರನ್, ತನ್ನ ಫ್ರ್ಯಾಂಚೈಸ್ ಕೂಡ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಮೂಲಕ ಬೆಂಬಲವನ್ನು ಸೂಚಿಸಿದ ನಂತರ ತಾವೂ ಅದರಲ್ಲಿ ಪ್ರಮುಖ ಪಾತ್ರ ವಹಿಸುವ ಇಚ್ಚೆ ವ್ಯಕ್ತಪಡಿಸಿದರು.

ಇಂಡಿಯನ್​ ಪ್ರೀಮಿಯರ್ ಲೀಗ್ ಆವೃತ್ತಿಗಾಗಿ ಪೂರನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 4.2 ಕೋಟಿ ರೂ. ನೀಡಿ ಖರೀದಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT