ಕ್ರಿಕೆಟ್

ಐಪಿಎಲ್ ನಲ್ಲಿ ಆಟಗಾರರ ಲಭ್ಯತೆ ಬಗ್ಗೆ ಖಚಿತಪಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಸಿಬಿ

Nagaraja AB

ನವದೆಹಲಿ: ಹಲವು ದಿನಗಳ ಊಹಾಪೋಹಗಳು ನಂತರ, ಎರಡು ಪ್ರಮುಖ ಕ್ರಿಕೆಟ್ ಮಂಡಳಿಗಳು ಅಧಿಕೃತವಾಗಿ ಐಪಿಎಲ್ 2021 ರ ಋತುವಿನಲ್ಲಿ ತಮ್ಮ ಆಟಗಾರರ ಲಭ್ಯತೆಯನ್ನು ಖಚಿತ ಪಡಿಸಿವೆ.

ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ತಮ್ಮ ಆಟಗಾರರಿಗಾಗಿ ಕಾಯಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಔಪಚಾರಿಕವಾಗಿ ತಿಳಿಸಿದೆ.  ಸೆಪ್ಟೆಂಬರ್ ನಿಂದ ಅಕ್ಟೋಬರ್ 15ರ ವರೆಗೆ ಐಪಿಎಲ್ ನಲ್ಲಿ ಭಾಗವಹಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಎರಡೂ ಮಂಡಳಿಗಳ ಸಂಪೂರ್ಣ ಸಹಕಾರದ ಬಗ್ಗೆ ಫ್ರಾಂಚೈಸಿಗಳಿಗೆ ಬಿಸಿಸಿಐ ಮಾಹಿತಿ ನೀಡಿದ ನಂತರ ಇದನ್ನು ದೃಢಪಡಿಸಲಾಗಿದೆ.

ಈ ಎರಡು ಮಂಡಳಿಗಳ ನಿರ್ಧಾರಗಳ ಬಗ್ಗೆ ತಿಳಿಸಲು ಐಪಿಎಲ್ ಸಿಒಒ ಹೇಮಾಂಗ್ ಅಮಿನ್ ಅವರು ಶುಕ್ರವಾರ ಪ್ರತಿ ಫ್ರಾಂಚೈಸಿಗೂ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಮತ್ತು ಪಂದ್ಯಾವಳಿಯಲ್ಲಿ ಭಾಗವಹಿಸಬೇಕೇ ಅಥವಾ ಬೇಡವೇ ಎಂಬುದು ಈಗ ಆಟಗಾರರಿಗೆ ಬಿಟ್ಟದ್ದು. ಈ ಆಟಗಾರರು ಪಂದ್ಯಾವಳಿಯ ಕೊನೆಯವರೆಗೂ ಲಭ್ಯರಿರುತ್ತಾರೆ ಎಂದು ಹೇಮಾಂಗ್ ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್  ಸಿಇಒ ಕಾಶಿ ವಿಶ್ವನಾಥನ್, ನಮಗೆ ಐಪಿಎಲ್ ಕಚೇರಿಯಿಂದ ಕರೆ ಬಂದಿದೆ ಮತ್ತು ಎರಡೂ ಮಂಡಳಿಯ ಆಟಗಾರರು (ಕ್ರಿಕೆಟ್ ಆಸ್ಟ್ರೇಲಿಯಾ, ಇಸಿಬಿ) ತಮ್ಮ ಆಟಗಾರರ ಭಾಗವಹಿಸುವಿಕೆಗೆ ಯಾವುದೇ ಆಕ್ಷೇಪವಿಲ್ಲ ಎಂದು ನಮಗೆ ತಿಳಿಸಲಾಗಿದೆ  ಎಂದಿದ್ದಾರೆ.

SCROLL FOR NEXT