ಕ್ರಿಕೆಟ್

ದೇಶಿ ಕ್ರಿಕೆಟ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಜನವರಿ 5 ರಂದು ರಣಜಿ ಆರಂಭಿಸಲು ಸಿದ್ಧತೆ

Lingaraj Badiger

ಮುಂಬೈ: ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ರಣಜಿ ಟ್ರೋಫಿ ರದ್ದಾಗಿತ್ತು. ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದೇಶಿ ಕ್ರಿಕೆಟ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಮುಂದಿನ ವರ್ಷದ ಆರಂಭದಲ್ಲಿ ರಣಜಿ ಟ್ರೋಫಿಯನ್ನು ಆಯೋಜಿಸಲು ನಿರ್ಧರಿಸಿದೆ.

2021-22 ದೇಶೀಯ ಕ್ರಿಕೆಟ್ ಕ್ಯಾಲೆಂಡರ್ ಆರಂಭದಲ್ಲಿ ಘೋಷಿಸಿದ ದಿನಾಂಕಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಕೋವಿಡ್ -19 ಸಾಂಕ್ರಾಮಿಕದ ನಡುವೆ ಪೂರ್ಣ ಪ್ರಮಾಣದ ದೇಶೀಯ ಋತುವನ್ನು ಆಯೋಜಿಸುವ ಸವಾಲನ್ನು ಎದುರಿಸುತ್ತಿರುವ ಬಿಸಿಸಿಐ ಈಗ ಕ್ಯಾಲೆಂಡರ್ ಅನ್ನು ಪರಿಷ್ಕರಿಸಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ತಿಳಿಸಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಈಗ ಅಕ್ಟೋಬರ್ 27 ರಂದು ಆರಂಭವಾಗುತ್ತದೆ ಮತ್ತು ನವೆಂಬರ್ 22 ರಂದು ಮುಕ್ತಾಯವಾಗುತ್ತದೆ. ಮುಖ್ಯವಾಗಿ, ರಣಜಿ ಟ್ರೋಫಿಯನ್ನು ಈಗ ಜನವರಿ 5 ರಿಂದ ಮಾರ್ಚ್ 20 ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ವಿಜಯ್ ಹಜಾರೆ ಟ್ರೋಫಿಯನ್ನು ಎರಡು ಪಂದ್ಯಾವಳಿಗಳ ನಡುವೆ ಡಿಸೆಂಬರ್ 1 ರಿಂದ 29 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 20 ರಂದು ಪುರುಷರ ಮತ್ತು ಮಹಿಳೆಯರ ಅಂಡರ್-19 ಏಕದಿನ ಪಂದ್ಯಾವಳಿಗಳು ಆರಂಭವಾಗಲಿದೆ. ಒಂದು ವೇಳೆ ದೇಶದಲ್ಲಿ ಕೊರೋನಾ ಹೆಚ್ಚಾದರೆ ಈ ದಿನಾಂಕಗಳು ಮತ್ತೆ ಬದಲಾಗಬಹುದು.

ಬಿಸಿಸಿಐ ಪ್ರಕಾರ, ದೇಶೀಯ ಪಂದ್ಯಾವಳಿಯನ್ನು ನಡೆಸುವ ಉದ್ದೇಶದಿಂದ ಭಾರತ ಸರ್ಕಾರ, ರಾಜ್ಯ ನಿಯಂತ್ರಕ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ರಣಜಿ ಟ್ರೋಫಿ ಮುಂದಿನ ವರ್ಷ ಜನವರಿ 5 ರಿಂದ ಮಾರ್ಚ್ 20 ರವರೆಗೆ ನಿಗದಿಪಡಿಸಲಾಗಿದೆ.

SCROLL FOR NEXT