ಕ್ರಿಕೆಟ್

3ನೇ ಟೆಸ್ಟ್: ಭಾರತದ ವಿರುದ್ಧ ಭಾರೀ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಇಂಗ್ಲೆಂಡ್

Srinivas Rao BV

ಲೀಡ್ಸ್: ನಾಯಕ ಜೋ ರೂಟ್ (121 ರನ್) ಇವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ಇಲ್ಲಿ ನಡೆದಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ.

ಗುರುವಾರ ಎರಡನೇ ದಿನದಾಟವನ್ನು ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಂದ ಆಟ ಮುಂದುವರಿಸಿದ ಇಂಗ್ಲೆಂಡ್ ದಿನದಾಟದ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 423 ರನ್ ಕಲೆ ಹಾಕಿತು. ಆತಿಥೇಯರು ಮೊದಲ ಇನ್ನಿಂಗ್ಸ್ ನಲ್ಲಿ 345 ರನ್ ಗಳ ಮುನ್ನಡೆ ಸಾಧಿಸಿದ್ದಾರೆ.

ರೂಟ್ ಈ ಸೀಸನ್ ನಲ್ಲಿ 6 ನೇ ಶತಕ ದಾಖಲಿಸಿದ್ದು, ಸರಣಿಯಲ್ಲಿ ಇದು ಮೂರನೇ ಶತಕವಾಗಿದೆ. ರೂಟ್ ಗೆ 50 ರನ್ ಗಳ ಜೊತೆಯಾಟ ನೀಡಿದ್ದ ಬೈರ್ ಸ್ಟೋ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ನಡೆದರು. ಶತಕವನ್ನೂ ಪೂರ್ಣಗೊಳಿಸಿ ಉತ್ತಮ ಆಟ ಪ್ರದರ್ಶಿಸುತ್ತಿದ್ದ ರೂಟ್ ಆರ್ಭಟವನ್ನು ಜಸ್ಪ್ರೀತ್ ಬೂಮ್ರಾ ಅಂತ್ಯಗೊಳಿಸಿದರು.

ದಿನಾಂತ್ಯದ ಕೊನೆಯ ಎಸೆತದಲ್ಲೂ ವಿಕೆಟ್ ಉರುಳಿ ಮೊಹಮ್ಮದ್ ಶಮಿ 70 ರನ್ ಗಳಿಸಿದ್ದ ಡೇವಿಡ್ ಮಲಾನ್ ಅವರನ್ನು ಪೆವಿಲಿಯನ್ ಗೆ ಕಳಿಸಿದರು. ಆದರೆ  ಆ ವೇಳೆಗೆ  ಜೋ ರೂಟ್ ಜೊತೆಗೂಡಿ ಮಲನ್ 139 ರನ್ ಗಳ ಜೊತೆಯಾಟ ನೀಡಿದ್ದರು.

ಮೊಹಮ್ಮದ್ ಶಮಿ ಭಾರತದ ಪರ 87 ರನ್ ನೀಡಿ 3 ವಿಕೆಟ್ ಪಡೆದು ಅತ್ಯುತ್ತಮ ಬೌಲಿಂಗ್ ಮಾಡಿದರು. ಜಡೇಜ 88 ರನ್ ನೀಡಿ 2 ವಿಕೆಟ್, ಮೊಹಮ್ಮದ್ ಸಿರಾಜ್ 86 ರನ್ ನೀಡಿ 2 ವಿಕೆಟ್, ಜಸ್ಪ್ರೀತ್ ಬುಮ್ರಾ 58 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

SCROLL FOR NEXT