ಫ್ರೆಡೆರಿಕ್ ಓವರ್ಡಿಜ್ಕ್ 
ಕ್ರಿಕೆಟ್

ಅಂತಾರಾಷ್ಟ್ರೀಯ ಟಿ20: 4 ಓವರ್‌ನಲ್ಲಿ 7 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಪೇಸರ್‌ ಫ್ರೆಡೆರಿಕ್

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವೊಂದರಲ್ಲಿ 7 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನು ನೆದರ್‌ಲ್ಯಾಂಡ್ಸ್‌ ನ ಫ್ರೆಡೆರಿಕ್‌ ನಿರ್ಮಿಸಿದ್ದಾರೆ.

ಸ್ಪೇನ್: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವೊಂದರಲ್ಲಿ 7 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನು ನೆದರ್‌ಲ್ಯಾಂಡ್ಸ್‌ ನ ಫ್ರೆಡೆರಿಕ್‌ ನಿರ್ಮಿಸಿದ್ದಾರೆ.

ಅದೂ ಕೇವಲ 4 ಓವರ್‌ಗಳಲ್ಲಿ ಎನ್ನುವುದು ವಿಶೇಷ, ಆ 4 ಓವರ್‌ಗಳಲ್ಲಿ ಎರಡು ಮೇಯಡನ್‌ ಇರುವುದು ಮತ್ತೊಂದು ವಿಶೇಷ. ಇನ್ನೊಂದು ದೊಡ್ಡ ವಿಷಯವೆಂದರೆ ಈ ನಾಲ್ಕು ಓವರ್ ಗಳಲ್ಲಿ ಫ್ರೆಡೆರಿಕ್‌ ಎದುರಾಳಿಗಳಿಗೆ ನೀಡಿದ್ದು ಕೇವಲ 3 ರನ್ ಗಳು ಮಾತ್ರ .. ಹೌದು, ಈ ಎಲ್ಲಾ ವಿಶೇಷಗಳೊಂದಿಗೆ ಇತಿಹಾಸ ನಿರ್ಮಿಸಿದ ನೆದರ್‌ಲ್ಯಾಂಡ್ಸ್ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಫ್ರೆಡೆರಿಕ್ ಅವರ ಹೆಸರು ಯುರೋಪಿಯನ್ ಕ್ರಿಕೆಟ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಗುರುವಾರ ಸ್ಪೇನ್ ನಲ್ಲಿ ನಡೆದ ಫ್ರಾನ್ಸ್ ವಿರುದ್ಧದ ಮಹಿಳಾ ಟಿ 20 ವಿಶ್ವಕಪ್ ಯುರೋಪ್ ಅರ್ಹತಾ ಪಂದ್ಯದಲ್ಲಿ ಫ್ರೆಡೆರಿಕ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಆರು ಮಂದಿಯನ್ನು ಬೌಲ್ಡ್‌ ಮಾಡಿದ ಫ್ರೆಡೆರಿಕ್‌ ಮತ್ತೊಬ್ಬರನ್ನು LBW ಮಾಡಿದ್ದಾರೆ.

ಫ್ರಾನ್ಸ್ ಅನ್ನು 17.5 ಓವರ್ ಗಳಲ್ಲಿ ಕೇವಲ 33 ರನ್ ಗಳಿಗೆ ಸೀಮಿತಗೊಳಿಸಿದ್ದ ನೆದರ್‌ ಲ್ಯಾಂಡ್ಸ್, ನಂತರ 3.4 ಓವರ್ ಗಳಲ್ಲಿ 9 ವಿಕೆಟ್ ಅಂತರರೊಂದಿಗೆ ಫ್ರಾನ್ಸ್‌ ವಿರುದ್ದ ಘನ ಗೆಲುವು ಸಾಧಿಸಿದೆ. ನೆದರ್‌ ಲ್ಯಾಂಡ್ಸ್ ಕ್ರಿಕೆಟ್ ತಂಡವನ್ನು ಘನ ವಿಜಯದತ್ತ ಮುನ್ನಡೆಸಿದ ಫ್ರೆಡೆರಿಕ್‌ ಗೆ ಅಭಿನಂದನೆಯ ಸುರಿಮಳೆಯಾಗುತ್ತಿದೆ.

ಟಿ 20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಹಿಂದೆ ನೇಪಾಳದ ಮಹಿಳಾ ಕ್ರಿಕೆಟರ್‌ ಅಂಜಲಿ ಚಂದ್ ಒಂದು ಪಂದ್ಯದಲ್ಲಿ ಆರು ವಿಕೆಟ್ ಪಡೆದಿದ್ದರು. 2019 ರಲ್ಲಿ ಅಂಜಲಿ ಚಂದ್ ಮಾಲ್ಡೀವ್ಸ್ ವಿರುದ್ಧ ಒಂದೇ ಒಂದು ರನ್ ನೀಡದೆ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT