ಕ್ರಿಕೆಟ್

3ನೇ ಟೆಸ್ಟ್: ಇತಿಹಾಸ ನಿರ್ಮಿಸಿದ ಆಂಡರ್ಸನ್, ಈ ಸಾಧನೆ ಮಾಡಿದ ಏಕೈಕ ಬೌಲರ್‌

Lingaraj Badiger

ಲೀಡ್ಸ್: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಇತಿಹಾಸ ನಿರ್ಮಿಸಿದ್ದಾರೆ.

ಆಂಡರ್ಸನ್ ಅವರು ತವರಿನಲ್ಲಿ(ಇಂಗ್ಲಿಷ್ ನೆಲದಲ್ಲಿ) 400 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆಗೆ ಸೇರಿದ್ದಾರೆ. ಆಂಡರ್ಸನ್ ಗಿಂತ ಮೊದಲು ಇಂಗ್ಲೆಂಡಿನಲ್ಲಿ ಬೇರೆ ಯಾವ ಬೌಲರ್ ಕೂಡ ಈ ಸಾಧನೆ ಮಾಡಿರಲಿಲ್ಲ. ಈ ಪಟ್ಟಿಯಲ್ಲಿ ಅಂಡರ್ಸನ್‌ ನಂತರ ಸ್ಥಾನದಲ್ಲಿ   ಸ್ಟುವರ್ಟ್ ಬ್ರಾಡ್(341 ವಿಕೆಟ್),  ಫ್ರೆಡ್ ಟ್ರೂಮನ್ (229 ವಿಕೆಟ್) ಇದ್ದಾರೆ.

ಇನ್ನೂ ತವರು ನೆಲದಲ್ಲಿ ಒಟ್ಟಾರೆ 400ಕ್ಕೂ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶ್ರೀಲಂಕಾದ ಪ್ರಸಿದ್ಧ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಆಂಡರ್ಸನ್ (400), ಅನಿಲ್ ಕುಂಬ್ಳೆ (350), ಸ್ಟುವರ್ಟ್ ಬ್ರಾಡ್ (341),  ಶೇನ್ ವಾರ್ನ್ (319) ಕ್ರಮವಾಗಿ ಎರಡರಿಂದ ಐದನೇ ಸ್ಥಾನದಲ್ಲಿದ್ದಾರೆ.

ಈ ನಡುವೆ, ಭಾರತ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಆಂಡರ್ಸನ್ ಮತ್ತೊಂದು ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡಕ್ಕೆ ಅತ್ಯಧಿಕ ಮೆಯಡನ್‌ ಓವರ್‌ ಗಳನ್ನು ಮಾಡಿದ ಬೌಲರ್‌ ಎಂಬ ದಾಖಲೆಯನ್ನು ಅವರು ಹೊಂದಿದ್ದಾರೆ. 

ಆಂಡರ್ಸನ್ ಭಾರತಕ್ಕೆ 330 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಈ ಹಿಂದೆ ಇಂಗ್ಲೆಂಡ್‌ನ ಮಾಜಿ ಬೌಲರ್ ಡೆರೆಕ್ ಅಂಡರ್‌ವುಡ್ ಈ ದಾಖಲೆಯನ್ನು ಹೊಂದಿದ್ದರು. ಅಂಡರ್ ವುಡ್ ಭಾರತಕ್ಕೆ  322 ಮೇಡನ್ ಓವರ್ ಬೌಲ್ ಮಾಡಿದರು. ಆದರೆ, ಇಂಗ್ಲೆಂಡ್‌ ನೊಂದಿಗೆ  ಐದು ಟೆಸ್ಟ್‌ಗಳ ಸರಣಿಯ ಭಾಗವಾಗಿ ಲೀಡ್ಸ್‌ನಲ್ಲಿ  ಮುಗಿದ  ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ.   ಎರಡನೇ ಇನ್ನಿಂಗ್ಸ್ ನಲ್ಲಿ 278 ರನ್ ಗಳಿಗೆ  ಭಾರತ ಆಲೌಟ್ ಆಯಿತು. ಇನಿಂಗ್ಸ್ ನಲ್ಲಿ 76 ರನ್ ಗಳಿಂದ ಸೋತಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿಯನ್ನು 1-1 ಸಮಬಲಗೊಳಿಸಿದೆ. 

215/2  ಓವರ್‌ ನೈಟ್‌  ಸ್ಕೋರಿನೊಂದಿಗೆ ನಾಲ್ಕನೇ ದಿನವನ್ನು ಆರಂಭಿಸಿದ ಭಾರತ ಯಾವುದೇ ಹಂತದಲ್ಲಿ ಕನಿಷ್ಠ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಪಂದ್ಯ ಆರಂಭವಾದ ಹತ್ತು ನಿಮಿಷಗಳ ನಂತರ ವಿಕೆಟ್ ಗಳು ಬೀಳಲಾರಂಭಿಸಿದವು. ಒಲಿ ರಾಬಿನ್ಸನ್ (5/65) ಮತ್ತು ಓವರ್ಟನ್ (3/47) ಭಾರತೀಯ ಬ್ಯಾಟ್ಸ್‌ಮನ್‌ ಗಳು ಪೆವಿಲಿಯನ್ ಗೆ ಸರದಿಯಂತೆ ನಡೆದರು. ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್  ಸೇರಿ  ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದ ರಾಬಿನ್ಸನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು. ಉಭಯ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಸೆಪ್ಟೆಂಬರ್ 2 ರಿಂದ ಆರಂಭವಾಗುತ್ತದೆ.

SCROLL FOR NEXT