ಕ್ರಿಕೆಟ್

ಐಪಿಎಲ್ 2022: ಲಖನೌ ಸಾರಥಿಯಾಗಿ ಕೆಎಲ್ ರಾಹುಲ್; ಅಹಮದಾಬಾದ್ ಗೆ ಶ್ರೇಯಸ್ ನಾಯಕ - ವರದಿ

Vishwanath S

ಮುಂಬೈ: ಐಪಿಎಲ್ ಮೆಗಾ ಹರಾಜಿಗೆ ದಿನಗಳು ಸಮೀಪಿಸುತ್ತಿರುವಂತೆಯೇ.. ಯಾವ ಆಟಗಾರ ಎಷ್ಟು ಮೊತ್ತಕ್ಕೆ ಮಾರಾಟವಾಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. 

ಈಗಿರುವ 8 ಫ್ರಾಂಚೈಸಿಗಳ ಜೊತೆಗೆ, ಲಖನೌ, ಅಹಮದಾಬಾದ್‌ ಹೆಸರಿನಲ್ಲಿ ಇನ್ನೂ ಎರಡು ಫ್ರಾಂಚೈಸಿಗಳು ಬರಲಿವೆ. ಇದರೊಂದಿಗೆ ಎರಡು ಹೊಸ ಫ್ರಾಂಚೈಸಿಗಳಿಗೆ ಯಾರು ನಾಯಕರಾಗಲಿದ್ದಾರೆ ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಮೆಗಾ ಹರಾಜಿಗೆ ಮೊದಲು, ಈ ಎರಡು ಹೊಸ ಫ್ರಾಂಚೈಸಿಗಳಿಗೆ ನಾನ್ ರಿಟೈನರ್ ಆಟಗಾರರ ಪಟ್ಟಿಯಿಂದ ಕೇವಲ ಮೂವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಲಿದೆ.

ಡಿಸೆಂಬರ್ 25ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ, ಐಪಿಎಲ್ ಮಂಡಳಿಗೆ ವಿವರ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಲಖನೌ, ಅಹಮದಾಬಾದ್ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಮೂವರ ಹೆಸರನ್ನು ಬಹುತೇಕ ಅಂತಿಮಗೊಳಿವೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಪಂಜಾಬ್ ಕಿಂಗ್ಸ್ ತೊರೆದಿರುವ ಕೆ. ಎಲ್. ರಾಹುಲ್ ಲಖನೌ ಫ್ರಾಂಚೈಸಿಯ ನಾಯಕರಾಗುವ ಅವಕಾಶವಿದೆ. ಅಹಮದಾಬಾದ್‌ ಫ್ರಾಂಚೈಸಿಗೆ ಶ್ರೇಯಸ್‌ ಅಯ್ಯರ್‌ ನಾಯಕರಾಗುವ ಅವಕಾಶವಿದ್ದರೂ ಹರಾಜಿನಲ್ಲಿ ವಾರ್ನರ್‌ ಲಭ್ಯವಾದರೆ ಆತನಿಗೂ ಕೂಡ ಅವಕಾಶ ಇರಲಿದೆ. ಇನ್ನೂ ಕೆಎಲ್ ರಾಹುಲ್, ರಶೀದ್ ಖಾನ್ , ಇಶಾನ್ ಕಿಶನ್ ಅವರನ್ನು ಲಖನೌದಲ್ಲಿ ಅಂತಿಮಗೊಳಿಸಲಾಗುತ್ತದೆ . ಮತ್ತೊಂದು ಕಡೆ ಅಹಮದಾಬಾದ್‌ ಶ್ರೇಯಸ್‌ ಜೊತೆಗೆ ಹಾರ್ದಿಕ್‌ ಪಾಂಡ್ಯ ಎರಡನೇ ಆಟಗಾರನಾಗಿ, ಮೂರನೇ ಆಟಗಾರರಾಗಿ ಕ್ವಿಂಟನ್‌ ಡಿಕಾಕ್‌ ಇಲ್ಲವೆ ಡೇವಿಡ್‌ ವಾರ್ನರ್‌ ರಲ್ಲಿ ಯಾರಾದರೂ ಒಬ್ಬರನ್ನು ತೆಗೆದುಕೊಳ್ಳಬೇಕು ಎಂದು ಭಾವಿಸಿದೆ.

ಇನ್ನೂ 2014ರ ನಂತರ ಐ ಪಿ ಎಲ್ ಮೆಗಾ ಹರಾಜು ನಡೆಯದೇ ಇರುವುದರಿಂದ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈಗಾಗಲೇ 8 ಫ್ರಾಂಚೈಸಿ ತಂಡಗಳು ಉಳಿಸಿಕೊಂಡವರ, ಬಿಡುಗಡೆಗೊಳಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ಬಾರಿ ಹರಾಜಿನಲ್ಲಿ ಎಲ್ಲ ಫ್ರಾಂಚೈಸಿಗಳು ಹೆಚ್ಚು ಆಟಗಾರರನ್ನು ಖರೀದಿಸಲಿವೆ. ಜನವರಿ ಮೊದಲ ವಾರದಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ಇನ್ನೂ ತಾವು ಮೆಗಾ ಹರಾಜು ನಡೆಯುವುದು ಕೊನೆಯ ಬಾರಿ ಆಗಬಹುದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT