ಕ್ರಿಕೆಟ್

ಎಸೆದಿದ್ದು 24 ಬಾಲ್, ನೀಡಿದ್ದು 70 ರನ್: ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಕಳಪೆ ದಾಖಲೆ 

Harshavardhan M

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ಲೀಗ್, ಬಿಗ್ ಬಾಷ್ ಲೀಗ್-2021 ರಲ್ಲಿ ಬ್ರಿಸ್ಬೇನ್ ಹೀಟ್‌ ತಂಡದ ಬೌಲರ್ ಲಿಯಾಮ್ ಗುತ್ರೀ ಅತ್ಯಂತ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್‌ ತಂಡಗಳ ನಡುವಿನ ಪಂದ್ಯದಲ್ಲಿ 4 ಓವರ್‌ಗಳನ್ನು ಎಸೆದ ಬೌಲರ್ ಗುತ್ರೀ ಒಟ್ಟು 70 ರನ್ ನೀಡಿದ್ದಾರೆ. 

ಬಿಗ್ ಬಾಷ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ನೀಡಿದ ಬೌಲರ್ ಎಂಬ ಕೆಟ್ಟ ದಾಖಲೆ ಸೃಷ್ಟಿಸಿದ್ದಾರೆ. ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಗುತ್ರೀ 70 ರನ್ ನೀಡಿ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಸಿಡ್ನಿ ಸಿಕ್ಸರ್ಸ್ ಬೌಲರ್ ಬೆನ್ ಡ್ವಾರ್ಜುಯಿಸ್ 61 ರನ್ ನೀಡಿದ್ದರು. ಇನ್ನು ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮೆಲ್ಬೋರ್ನ್ ಸ್ಟಾರ್ಸ್ ತಂಡ ಮೊದಲ ಓವರ್ ನಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ನಾಯಕ ಮ್ಯಾಕ್ಸ್ ವೆಲ್ ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು.

ಬ್ರಿಸ್ಬೇನ್ ಹೀಟ್ ತಂಡ ನಿಗದಿತ 20 ಓವರ್ ಗಳಲ್ಲಿ 187 ರನ್ ಗಳಿಗೆ ಆಲೌಟ್ ಆಗಿ 20 ರನ್‌ಗಳಿಂದ ಸೋತಿತು. ಮೆಲ್ಬೋರ್ನ್ ಬೌಲರ್‌ಗಳಲ್ಲಿ ಬ್ರಾಡಿ ಕೌಚ್ ಕೈಸ್ ಅಹ್ಮದ್ ಚೆರೋ ತಲಾ ಮೂರು ವಿಕೆಟ್ ಪಡೆದರು.

SCROLL FOR NEXT