ಶ್ರೀಲಂಕಾ, ಇಂಗ್ಲೆಂಡ್ ತಂಡದ ಆಟಗಾರರು 
ಕ್ರಿಕೆಟ್

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆಯನ್ನು ನಮೂದಿಸಿದೆ. ಏಕದಿನ ಪಂದ್ಯಗಳಲ್ಲಿ ಹೆಚ್ಚು ಸೋಲು ಅನುಭವಿಸಿದ ತಂಡವಾಗಿ ಶ್ರೀಲಂಕಾ ಮೊದಲ ಸ್ಥಾನ ಪಡೆದುಕೊಂಡಿದೆ.

ಲಂಡನ್: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಅತ್ಯಂತ ಕೆಟ್ಟ ದಾಖಲೆಯನ್ನು ನಮೂದಿಸಿದೆ. ಏಕದಿನ ಪಂದ್ಯಗಳಲ್ಲಿ ಹೆಚ್ಚು ಸೋಲು ಅನುಭವಿಸಿದ ತಂಡವಾಗಿ ಶ್ರೀಲಂಕಾ ಮೊದಲ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಭಾಗವಾಗಿ ಮೊದಲ ಏಕದಿನ ಪಂದ್ಯ ಸೋತ ಶ್ರೀಲಂಕಾ ತಂಡ 428 ನೇ ಸೋಲು ಪಡೆದುಕೊಂಡಿದೆ.

 ಒಟ್ಟಾರೆ, ಈವರೆಗೆ ಶ್ರೀಲಂಕಾ 858 ಏಕದಿನ ಪಂದ್ಯಗಳನ್ನು ಆಡಿದ್ದು, 390 ಗೆಲುವು, 428 ಸೋಲು ಅನುಭವಿಸಿದೆ. ಆದರೆ, ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸೋಲು ಅನುಭವಿಸಿದ ಎರಡನೇ ತಂಡ ಟೀಮ್ ಇಂಡಿಯಾ (427) ಎಂಬುದು ಗಮನಾರ್ಹ. ಆದರೆ, ಟೀಮ್ ಇಂಡಿಯಾ ಪಂದ್ಯಗಳ ಸಂಖ್ಯೆಗಳನ್ನು ಪರಿಗಣಿಸಿದರೆ ಶ್ರೀಲಂಕಾದಿಂದ ಬಹಳ ದೂರವಿದೆ.

ಟೀಮ್‌ ಇಂಡಿಯಾ ಒಟ್ಟು 993 ಏಕದಿನ ಪಂದ್ಯಗಳನ್ನು ಆಡಿದೆ. ಲಂಕಾಕ್ಕೆ ಹೋಲಿಸಿದರೆ 137 ಹೆಚ್ಚು ಪಂದ್ಯಗಳನ್ನು ಆಡಿದೆ. ಇನ್ನೂ ಯಶಸ್ಸಿನ ಪ್ರಮಾಣ ನೋಡಿದರೆ ಭಾರತ ಶೇ. 54.67 ರಷ್ಟಿದ್ದರೆ, ಶ್ರೀಲಂಕಾ ಶೇ 47.69 ರಷ್ಟಿದೆ. ಪಾಕಿಸ್ತಾನ 414 ಸೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮತ್ತೊಂದು ವಿಶೇಷವೆಂದರೆ ಟಿ 20 ಯಲ್ಲಿ ಶ್ರೀಲಂಕಾ ( 70) ಅತಿ ಹೆಚ್ಚು ಸೋಲು ಕಂಡ ತಂಡವಾಗಿ ಮೊದಲ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 67, ಪಾಕಿಸ್ತಾನ 65 ಸೋಲುಗಳೊಂದಿಗೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.

ಕುಮಾರ ಸಂಗಕ್ಕಾರ, ಜಯವರ್ಧನೆ ಅವರಂತಹ ಸ್ಟಾರ್ ಆಟಗಾರರು ತಂಡದಿಂದ ಹೊರಗುಳಿದ ನಂತರ, ಶ್ರೀಲಂಕಾದ ತನ್ನ ಆಟದ ಶೈಲಿ ಕೆಟ್ಟ ಸ್ಥಿತಿಗೆ ತಲುಪಲು ಸಜ್ಜಾಗಿದೆ. ಈ ಮಧ್ಯೆ ಆಡಿದ ಪ್ರತಿಯೊಂದು ಸರಣಿಯಲ್ಲೂ ಲಂಕಾ ತಂಡ ಸೋಲಿನ ಸರಣಿ ಅನುಭವಿಸಿದೆ. 

ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಡುತ್ತಿರುವ ಲಂಕಾ, ಟೀಮ್ ಇಂಡಿಯಾವನ್ನು ಸ್ವದೇಶದಲ್ಲಿ ಎದುರಿಸಲಿದೆ. ಮೂರು ಏಕದಿನ, ಮೂರು ಟಿ 20 ಪಂದ್ಯಗಳನ್ನು ಆಡಲಿರುವ ಟೀಮ್ ಇಂಡಿಯಾ ಎರಡನೇ ತಂಡವನ್ನು ಸೋಲಿಸಿ ಸರಣಿಯನ್ನು ಗೆಲ್ಲುತ್ತದೆಯೇ ಎಂದು ನೋಡಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video