ಕ್ರಿಕೆಟ್

2ನೇ ಏಕದಿನ: ಲಂಕಾ ವಿರುದ್ಧ ಪಂದ್ಯ ಗೆದ್ದರೆ 2 ವಿಶ್ವ ದಾಖಲೆ ನಿರ್ಮಿಸಲಿದೆ ಭಾರತ!

Srinivasamurthy VN

ಕೊಲಂಬೋ: ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯವನ್ನಾಡುತ್ತಿರುವ ಭಾರತ ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದು, 2ನೇ ಪಂದ್ಯವನ್ನು ಗೆದ್ದರೆ ಶಿಖರ್ ಧವನ್ ಪಡೆ ಆಸ್ಟ್ರೇಲಿಯಾ. ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಅಪರೂಪದ ವಿಶ್ವದಾಖಲೆಯನ್ನು ಬರೆಯಲಿದೆ.

ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿತ್ತು. ಭಾರತಕ್ಕೆ ಅದು ಏಕದಿನ ಕ್ರಿಕೆಟ್ ನಲ್ಲಿ 92ನೇ ಜಯವಾಗಿತ್ತು. ಈ ಜಯದ ಮೂಲಕ ಭಾರತ ತಂಡ ತನ್ನ  ಗೆಲುವಿನ ಮೂಲಕ ಭಾರತ ತಂಡ ಅತೀ ಹೆಚ್ಚು ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳೊಂದಿಗೆ ಜಂಟಿ ಅಗ್ರ ಸ್ಥಾನಕ್ಕೇರಿತ್ತು. 

ಇತ್ತ ಆಸ್ಟ್ರೇಲಿಯಾ ಕೂಡ ನ್ಯೂಜಿಲೆಂಡ್ ವಿರುದ್ಧ 92 ಏಕದಿನ ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಲಂಕಾ ವಿರುದ್ಧ ಒಟ್ಟು 92 ಪಂದ್ಯಗಳನ್ನು ಗೆದ್ದಿದೆ.  ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಲಂಕಾ ವಿರುದ್ಧ 93 ಏಕದಿನ ಪಂದ್ಯ ಗೆದ್ದ ಸಾಧನೆ ಮಾಡಲಿದೆ. ಈ ಮೂಲಕ ಒಂದು  ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯವನ್ನು ಗೆದ್ದ ಟೀಮ್ ಭಾರತ ಆಗಲಿದ್ದು, ಇದು ವಿಶ್ವ ದಾಖಲೆಯಾಗಲಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವೂ ಭಾರತ 55 ಏಕದಿನ ಪಂದ್ಯ ಗೆದ್ದ ಸಾಧನೆ ಹೊಂದಿದೆ.

ಇಂದು ನಡೆಯುತ್ತಿರುವ 2ನೇ ಪಂದ್ಯವನ್ನೂ ಗೆದ್ದರೆ ಭಾರತ ತಂಡ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ತಾನು ಅಗ್ರಸ್ಥಾನವನ್ನು ಅಲಂಕರಿಸುತ್ತದೆ. ಅಲ್ಲದೆ ಜಂಟಿ ಅಗ್ರ ಸ್ಥಾನದಲ್ಲಿದ್ದ ಆಸಿಸ್ ಮತ್ತು ಪಾಕ್ ತಂಡಗಳನ್ನು 2ನೇ ಸ್ಥಾನಕ್ಕೆ ತಳ್ಳುತ್ತದೆ.

2ನೇ ವಿಶ್ವದಾಖಲೆ
ಅಲ್ಲದೆ 2007 ರಿಂದ ಸತತವಾಗಿ ಲಂಕಾ ವಿರುದ್ಧ ಸರಣಿ ಜಯ ಸಾಧಿಸುತ್ತಾ ಬಂದಿರುವ ಭಾರತ ಈ ಸರಣಿಯನ್ನೂ ವಶಪಡಿಸಿಕೊಂಡರೆ ಸತತವಾಗಿ ಶ್ರೀಲಂಕಾ ವಿರುದ್ಧ 9ನೇ ಸರಣಿ ಗೆದ್ದಂತಾಗುತ್ತದೆ. ಇದಲ್ಲದೆ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಟೀಮ್ ಇಂಡಿಯಾವಿದೆ. 

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಜಯ ಸಾಧಿಸಿದ ಟೀಮ್​ಗಳ ಸಾಲಿನಲ್ಲಿ ಭಾರತ, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡ ಜಂಟಿ ಸ್ಥಾನದಲ್ಲಿದೆ.

ಲಂಕಾ ಪಡೆಗೆ ಮಾಡು ಇಲ್ಲವೇ ಮಡಿ ಸ್ಥಿತಿ
ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆದ್ದು ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇಂದಿನ ಪಂದ್ಯವನ್ನೂ ಜಯಿಸಿ ಸರಣಿ ವಶಪಡಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಇತ್ತ ಸಿಂಹಳೀಯರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರೆ ಮಾತ್ರ ಸರಣಿ ಆಸೆ ಜೀವಂತವಾಗಿರಲಿದೆ. ಹೀಗಾಗಿ ಪ್ರೇಮದಾಸ  ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯವಾಗುವ ಎಲ್ಲಾ ಲಕ್ಷಣಗಳಿವೆ.

SCROLL FOR NEXT