ಕ್ರಿಕೆಟ್

ಲಂಕಾ ವಿರುದ್ಧ 2 ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ; ಸರಣಿ ಗೆಲುವು

Srinivas Rao BV

ಕೊಲಂಬೊ: ಭಾರತದ 8 ನೇ ಕ್ರಮಾಂಕದ ಆಟಗಾರ ದೀಪಕ್ ಚಹಾರ್-ಸೂರ್ಯಕುಮಾರ್ ಭರ್ಜರಿ ಆಟದ ಪರಿಣಾಮ ಭಾರತ ಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದಿದೆ. 

ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್ ಗೆ ಬಂದ ದೀಪಕ್ ಚಹಾರ್ ಹಾಗೂ ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧ ಶತಕದ ಮೂಲಕ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. 

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ, ನಿಗದಿತ 50 ಓವರ್ ಗಳಲ್ಲಿ 275 ರನ್ ಗಳನ್ನು ಗಳಿಸಿ ಭಾರತದ ಗೆಲುವಿಗೆ 276 ರನ್ ಗಳ ಗುರಿ ನೀಡಿತ್ತು. ಭಾರತದ ಆರಂಭಿಕ ಆಟಗಾರರಾದ ಪೃಥ್ವಿ ಶಾ (11 ಎಸೆತಗಳಿಗೆ 13 ರನ್) ಶಿಖರ್ ಧವನ್ (38 ಎಸೆತಗಳಲ್ಲಿ 29 ರನ್) ಗಳಿಸಿ ಪೆವಿಲಿಯನ್ ಸೇರಿದರು. ಪರಿಣಾಮ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್ನು ಕಳೆದ ಪಂದ್ಯದಲ್ಲಿ ಮಿಂಚಿದ್ದ ಇಶಾನ್ ಕಿಶನ್ ಈ ಬಾರಿ 4 ಎಸೆತಗಳಲ್ಲಿ 1 ರನ್ ಗಳಿಸಿ ಕಸುನ್ ರಜಿತಾ ಅವರಿಗೆ ವಿಕೆಟ್ ಒಪ್ಪಿಸಿದರು. 

ಈ ಹಂತದಲ್ಲಿ ಮಧ್ಯಮ ಕ್ರಮಾಂಕದ ಆಟಗಾರರಾದ ಮನೀಷ್ ಪಾಂಡೆ (31 ಎಸೆತಗಳಲ್ಲಿ 37 ರನ್) ಹಾಗೂ ಸೂರ್ಯ ಕುಮಾರ್ ಯಾದವ್ (44 ಎಸೆತಗಳಲ್ಲಿ 53) ರನ್ ಗಳ ಜೊತೆಯಾಟ ಭಾರತ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಗೆಲುವಿನ ಹಾದಿ ಸುಗಮವಾಗುವ ಮುನ್ನವೇ ಈ ಜೊತೆಯಾಟ ಮುರಿಯಿತು. ನಂತರ ಕೃನಾಲ್ ಪಾಂಡ್ಯ (54 ಎಸೆತಗಳಲ್ಲಿ 35 ರನ್) ದೀಪಕ್ ಚಹಾರ್ (82 ಎಸೆತಗಳಲ್ಲಿ 69 ರನ್) ಗಳಿಸಿದರು. ಆದರೂ ಅಂತಿಮ ಘಟ್ಟದವರೆಗೂ ಭಾರತದ ಗೆಲುವಿನ ಹಾದಿ ಕಷ್ಟವಾಗಿತ್ತು. ಗೆಲುವಿನ ಸನಿಹದಲ್ಲಿದ್ದ ಭಾರತಕ್ಕೆ ಕೊನೆಯ ಓವರ್ ನಲ್ಲಿ ಮೂರು ರನ್ ಗಳು ಅಗತ್ಯವಿತ್ತು. ರಜಿತಾ ಓವರ್ ನಲ್ಲಿ ಇನ್ನೂ 5 ಎಸೆತ ಬಾಕಿ ಇರುವಾಗಲೇ ದೀಪಕ್ ಚಹಾರ್ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ಭಾರತ ಲಂಕಾ ವಿರುದ್ಧ ಮೂರು ವಿಕೆಟ್ ಗಳ ಜಯ ದಾಖಲಿಸುವುದಕ್ಕೆ ಕಾರಣರಾದರು. ಈ ಗೆಲುವಿನ ಮೂಲಕ ಸರಣಿಯಲ್ಲಿ ಭಾರತ-2-0 ಮುನ್ನಡೆ ಮೂಲಕ ಸರಣಿ ಗೆಲುವನ್ನು ಖಾತ್ರಿಪಡಿಸಿಕೊಂಡಿದೆ.

SCROLL FOR NEXT