ಕ್ರಿಕೆಟ್

2ನೇ ಏಕದಿನ: ಲಂಕಾ ವಿರುದ್ಧ ಪಂದ್ಯ ಗೆದ್ದು ಎರಡು ವಿಶ್ವ ದಾಖಲೆ ನಿರ್ಮಿಸಿದ ಭಾರತ!

Srinivasamurthy VN

ಕೊಲಂಬೋ: ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆದ್ದು ಭಾರತ ತಂಡ 2 ವಿಶೇಷ ಮತ್ತು ಅಪರೂಪದ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. 

ಶ್ರೀಲಂಕಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲೂ ಭಾರತ ತಂಡ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದ್ದು, ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಭಾರತಕ್ಕೆ ಇದು ಏಕದಿನ ಕ್ರಿಕೆಟ್  ನಲ್ಲಿ 93ನೇ ಜಯವಾಗಿತ್ತು. ಈ ಜಯದ ಮೂಲಕ ಭಾರತ ತಂಡವೊಂದರ ವಿರುದ್ಧ ಅತೀ ಹೆಚ್ಚು ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ. 

ಇತ್ತ ಆಸ್ಟ್ರೇಲಿಯಾ ಕೂಡ ನ್ಯೂಜಿಲೆಂಡ್ ವಿರುದ್ಧ 92 ಏಕದಿನ ಪಂದ್ಯಗಳನ್ನು ಗೆದ್ದಿದ್ದು, ಪಾಕಿಸ್ತಾನ ಕೂಡ ಶ್ರೀಲಂಕಾ ವಿರುದ್ಧ ಒಟ್ಟು 92 ಪಂದ್ಯಗಳನ್ನು ಗೆದ್ದಿದೆ. ಆ ಮೂಲಕ ಈ ಎರಡೂ ತಂಡಗಳು ಜಂಟಿ ಎರಡನೇ ಸ್ಥಾನಕ್ಕೆ ಕುಸಿದಿವೆ. ಶ್ರೀಲಂಕಾ ವಿರುದ್ಧ 93 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ  ತಂಡವೊಂದರ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. 

ಲಂಕಾ ಮಾತ್ರವಲ್ಲದೇ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವೂ ಭಾರತ 55 ಏಕದಿನ ಪಂದ್ಯ ಗೆದ್ದ ಸಾಧನೆ ಹೊಂದಿದೆ.

ಶ್ರೀಲಂಕಾ ವಿರುದ್ಧ ಸತತ 9ನೇ ಏಕದಿನ ಸರಣಿ ಗೆಲುವು
ಶ್ರೀಲಂಕಾ ವಿರುದ್ಧ ಭಾರತ ತಂಡವು ಸತತ ಒಂಬತ್ತನೇ ಏಕದಿನ ಸರಣಿ ಗೆಲುವು ದಾಖಲಿಸಿದೆ. 1997ರಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡವು ಕೊನೆಯದಾಗಿ ಗೆದ್ದಿತ್ತು. ಅಲ್ಲಿಂದ ಬಳಿಕ ಆಡಿರುವ 12 ಸರಣಿಗಳ ಪೈಕಿ 10ರಲ್ಲಿ ಭಾರತ ಗೆಲುವು ಬಾರಿಸಿದೆ. ಎರಡು ಸರಣಿ ಡ್ರಾದಲ್ಲಿ ಅಂತ್ಯಗೊಂಡಿತ್ತು. ಇನ್ನು ಕ್ರಿಕೆಟ್‌ನ ಎಲ್ಲ ಮಾದರಿಯಲ್ಲಿ ಲಂಕಾ ವಿರುದ್ಧ ಸತತ 11ನೇ ಸರಣಿ ಗೆಲುವು ದಾಖಲಿಸಿದೆ. 2008ರಲ್ಲಿ ಶ್ರೀಲಂಕಾ ಕೊನೆಯದಾಗಿ ಭಾರತ ವಿರುದ್ಧ ಉಭಯ ಸರಣಿ ಗೆದ್ದಿತ್ತು. ಅಂದು ಟೆಸ್ಟ್ ಸರಣಿಯಲ್ಲಿ 2-1ರ ಅಂತರದಲ್ಲಿ ಭಾರತ ಸೋಲನುಭವಿಸಿತ್ತು.

ಸತತ 10ನೇ ಗೆಲುವು..
ಲಂಕಾ ನೆಲದಲ್ಲಿ ಟೀಮ್ ಇಂಡಿಯಾ ಅವರದ್ದೇ ತಂಡದ ವಿರುದ್ಧ ಸತತ 10ನೇ ಏಕದಿನ ಗೆಲುವು ದಾಖಲಿಸಿದೆ. 2012ರಲ್ಲಿ ಅಲ್ಲಿ ಭಾರತ ಕೊನೆಯದಾಗಿ ಸೋತಿತ್ತು.

SCROLL FOR NEXT