ಕ್ರಿಕೆಟ್

3ನೇ ಪಂದ್ಯ: 9 ವರ್ಷಗಳ ಬಳಿಕ ತವರಿನಲ್ಲಿ ಏಕದಿನ ಪಂದ್ಯ ಗೆದ್ದ ಲಂಕಾ, ಭಾರತಕ್ಕೆ ಸರಣಿ

Srinivas Rao BV

ಕೊಲಂಬೊ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಲಂಕಾ ತಂಡ, ಭಾರತದ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಗೆಲುವು ಕಂಡಿದೆ.

ಕೊಲೊಂಬೋದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಗಳಿಂದ ಆತಿಥೇಯ ಪಡೆ ಎದುರು ಸೋತರೂ ಭಾರತ ತಂಡ ಸರಣಿ ಗೆದ್ದುಕೊಂಡಿದೆ. ಶ್ರೀಲಂಕಾ ತಂಡ ತವರಿನಲ್ಲಿ ಸುದೀರ್ಘ 9 ವರ್ಷಗಳ ಬಳಿಕ ಏಕದಿನ ಪಂದ್ಯವೊಂದನ್ನು ಗೆದ್ದಿದೆ. 

ಮಳೆಯ ವಿರಾಮವನ್ನು ಸಂಪೂರ್ಣವಾಗಿ ಬಳಸಿಕೊಂಡ ಲಂಕಾ ತಂಡ 43.1 ಓವರ್ ಗಳಿಗೆ ಭಾರತ ತಂಡವನ್ನು 225 ರನ್ ಗಳಿಗೆ ಬೌಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಡಕ್ವರ್ತ್ ಲೂಯಿಸ್ ಆಧಾರದಲ್ಲಿ ನಿಗದಿಯಾಗಿದ್ದ 227 ರನ್ ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ, 48 ಎಸೆತಗಳು ಬಾಕಿ ಇರುವಾಗಲೇ ಅಂದರೆ 39 ಓವರ್ ಗಳಿಗೆ 7 ವಿಕೆಟ್ ಕಳೆದುಕೊಂಡು 227 ರನ್ ಗಳ ಮೂಲಕ ಭಾರತದ ವಿರುದ್ಧ ಜಯಗಳಿಸಿತು. 

ಲಂಕಾ ಪರ ಅವಿಷ್ಕಾ ಫರ್ನಾಂಡೋ ( 98 ಎಸೆತಗಳಲ್ಲಿ 76 ರನ್)  ಭಾನುಕಾ ರಾಜಪಕ್ಸ (56 ಎಸೆತಗಳಲ್ಲಿ 65 ರನ್) ಗಳಿಸಿ ಲಂಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 

SCROLL FOR NEXT