ಒಲಿ ರಾಬಿನ್ಸನ್ 
ಕ್ರಿಕೆಟ್

ಎಂಟು ವರ್ಷದ ಹಿಂದಿನ ಟ್ವೀಟ್ ವಿವಾದ: ಇಂಗ್ಲೆಂಡ್ ಕ್ರಿಕೆಟಿಗ ರಾಬಿನ್ಸನ್ ಗೆ ಅಮಾನತು ಶಿಕ್ಷೆ

ಜನಾಂಗೀಯ ಮತ್ತು ಲೈಂಗಿಕ ಟ್ವಿಟ್ಟರ್ ಸಂದೇಶಗಳ ತನಿಖೆ ಬಾಕಿ ಇರುವ ಕಾರಣ ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಬೌಲರ್ ಒಲಿ ರಾಬಿನ್ಸನ್ ಅವರನ್ನು ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. 

ಲಂಡನ್: ಜನಾಂಗೀಯ ಮತ್ತು ಲೈಂಗಿಕ ಟ್ವಿಟ್ಟರ್ ಸಂದೇಶಗಳ ತನಿಖೆ ಬಾಕಿ ಇರುವ ಕಾರಣ ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಬೌಲರ್ ಒಲಿ ರಾಬಿನ್ಸನ್ ಅವರನ್ನು ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ಈ ಕಾರಣದಿಂದ ರಾಬಿನ್ಸನ್ ಮುಂದಿನ ವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭಾನುವಾರ ಪ್ರಕಟಿಸಿದೆ.

ಲಾರ್ಡ್ಸ್ ನಲ್ಲಿ ಹಿಂದಿನ ಭಾನುವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರಾಬಿನ್ಸನ್ ಇಂಗ್ಲೆಂಡ್ ಟೀಂಗೆ ಸೇರಿದ್ದರು. ಆದರೆ ಬ್ಯಾಟ್ ಮತ್ತು ಬೌಲಿಂಗ್ ನೊಂದಿಗಿನ  ಅವರ ವೃತ್ತಿ ಬದುಕು 2012 ಮತ್ತು 2013 ರಲ್ಲಿ ಮಾಡಿದ್ದ  ಜನಾಂಗೀಯ ಮತ್ತು ಲೈಂಗಿಕ ಟ್ವಿಟ್ಟರ್ ಸಂದೇಶಗಳ ಕಾರಣ ಮುಚ್ಚಲ್ಪಟ್ಟಿದೆ.

"ರಾಬಿನ್ಸನ್ ಅವರು  2012 ಮತ್ತು 2013 ರಲ್ಲಿ ಪೋಸ್ಟ್ ಮಾಡಿದ ಟ್ವಿಟ್ಟರ್ ಗಳ ಶಿಸ್ತಿನ ತನಿಖೆಯ ಫಲಿತಾಂಶ ಬಾಕಿ ಉಳಿದಿದೆ, ಹಾಗಾಗಿ ಎಲ್ಲಾ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ಅವರನ್ನು ಅಮಾನತುಗೊಳಿಸಲಾಗಿದೆ" ಎಂದು ಇಸಿಬಿ ಹೇಳಿಕೆ ತಿಳಿಸಿದೆ.

"ಜೂನ್ 10 ರ ಗುರುವಾರ ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ರಡನೇ ಟೆಸ್ಟ್ ಪಂದ್ಯದ ಆಯ್ಕೆಗೆ ಅವರು ಲಭ್ಯವಿರುವುದಿಲ್ಲ. ರಾಬಿನ್ಸನ್ ತಕ್ಷಣ ಇಂಗ್ಲೆಂಡ್ ಶಿಬಿರವನ್ನು ತೊರೆದು ತನ್ನ ಕೌಂಟಿಗೆ ಹಿಂದಿರುಗುತ್ತಾರೆ"

ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಇನ್ನಿಂಗ್ಸ್‌ನಲ್ಲಿ 4-75 ರನ್‌ಗಳೊಂದಿಗೆ ಇಂಗ್ಲೆಂಡ್‌ನ್ನು  ಮುನ್ನಡೆಸಿದರು ಮತ್ತು ಎರಡನೆ ಇನ್ನಿಂಗ್ಸ್ ನಲ್ಲಿ 3-26 ರನ್ ಗಳಿಸಿದರು ಮತ್ತು ಬ್ಯಾಟಿಂಗ್ ವೇಳೆ ಉಪಯುಕ್ತ 42 ರನ್ ಗ ಬಾರಿಸಿದ್ದರು.

ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಮೊದಲ ದಿನವಾದ ಬುಧವಾರದಂದು ಸ್ಟಂಪ್ ಮಾಡಿದ ನಂತರ ಅವರು ಕ್ಷಮೆಯಾಚಿಸಲಿಲ್ಲ ಎಂದು ಗಮನಿಸಿದ್ದ ರಾಬಿನ್ಸನ್ಮುಸ್ಲಿಂ ಜನರು ಭಯೋತ್ಪಾದನೆಗೆ ಸಂಬಂಧ ಹೊಂದಿದ್ದಾರೆಂದು ಸೂಚಿಸುವ ಕಾಮೆಂಟ್‌ಗಳು ಮತ್ತು ಮಹಿಳೆಯರು ಮತ್ತು ಏಷ್ಯನ್ ಪರಂಪರೆಯ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆಳನ್ನು ಹೊಂದಿರುವ ಟ್ವೀಟ್ ಮಾಡಿದ್ದಾರೆ.

ತಾರತಮ್ಯದ ವಿರುದ್ಧ ತಮ್ಮ ವಿರೋಧವನ್ನು ತೋರಿಸಲು ರಚಿಸಲಾದ 'ಮೊಮೆಂಟ್ ಆಫ್ ಯೂನಿಟಿ' ಗಾಗಿ ಬುಧವಾರ ಎರಡೂ ತಂಡಗಳು ಆಡುವ ಮೊದಲು ಅವರ ಟ್ವಿಟ್ಟರ್ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ರಾಬಿನ್ಸನ್, ಬುಧವಾರ ಆಟದ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅವರು ಪೋಸ್ಟ್ ಇಂದಾಗಿ "ಮುಜುಗರಕ್ಕೊಳಗಾಗಿದ್ದಾರೆ" ಮತ್ತು "ನಾಚಿಕೆಪಡುವುದಾಗಿ"ಹೇಳಿದರು. "ನಾನು ವರ್ಣಭೇದ ನೀತಿಯ ಸಮರ್ಥಕನಲ್ಲ,  ಅಲ್ಲದೆ ನಾನು ಸೆಕ್ಸಿಸ್ಟ್ ಅಲ್ಲ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು.

ಇಂಗ್ಲೆಂಡ್ ನಾಯಕ ಜೋ ರೂಟ್ ಭಾನುವಾರ ಸ್ಟಂಪ್ ನಂತರ ಮಾತನಾಡಿ ರಾಬಿನ್ಸನ್ ಅವರ ಅಮಾನತು ಘೋಷಣೆಯಾಗುವ ಮೊದಲು, ಟ್ವೀಟ್ ಬಗ್ಗೆ "ನಾನು ಅವರನ್ನು ವೈಯಕ್ತಿಕವಾಗಿ ನಂಬಲು ಸಾಧ್ಯವಾಗಲಿಲ್ಲ." ಎಂದರು. ಆದಾಗ್ಯೂ, ರಾಬಿನ್ಸನ್ "ಸಾಕಷ್ಟು ಪಶ್ಚಾತ್ತಾಪ" ವನ್ನು ತೋರಿಸಿದ್ದಾಗಿ ಅವರು ಒಪ್ಪಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

SCROLL FOR NEXT