ಅನ್ರಿಕ್ ನಾರ್ಟ್ಜೆ 
ಕ್ರಿಕೆಟ್

ಮೊದಲ ಟೆಸ್ಟ್: ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಇನ್ನಿಂಗ್ಸ್ ಹಾಗೂ 63 ರನ್ ಜಯ

ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಹಾಗೂ 63 ರನ್‌ ಗಳಿಂದ ಗೆಲುವು ಸಾಧಿಸಿದೆ.

ಸೇಂಟ್ ಲೂಸಿಯಾ: ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಹಾಗೂ 63 ರನ್‌ ಗಳಿಂದ ಗೆಲುವು ಸಾಧಿಸಿದೆ.

ಮೂರನೇ ದಿನದ ಮೊದಲ ಸೆಷನ್‌ನಲ್ಲಿ ವೆಸ್ಟ್ ಇಂಡೀಸ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಆಲೌಟ್ ಆಗಿದೆ. 

ಸೇಂಟ್ ಲೂಸಿಯಾದಲ್ಲಿ ಮೊದಲ ದಿನ ವೆಸ್ಟ್ ಇಂಡೀಸ್ ಅನ್ನು ಕೇವಲ 97 ಕ್ಕೆ ಕಟ್ಟಿ ಹಾಕಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಗಳು ಗೆಲುವು ಕಾಣುವ ತವಕದಲ್ಲಿದ್ದರುಕ್ವಿಂಟನ್ ಡಿ ಕಾಕ್ ಅವರ  ಅಜೇಯ 141 ರನ್ ದಕ್ಷಿಣ ಆಫ್ರಿಕಾವನ್ನು 322 ರನ್‌ಗಳಿಗೆ ತಲುಪಿಸಿತ್ತು. ಇದರೊಡನೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು.

ವೆಸ್ಟ್ ಇಂಡೀಸ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 82-4 ರೊಂದಿಗೆ ಮೂರನೇ ದಿನದಾಟ ಮುಂದುವರಿಸಿತ್ತು.ಊಟದ ವಿರಾಮಕ್ಕೆ ಮುನ್ನ ದಕ್ಷಿಣ ಆಫ್ರಿಕಾ ಗೆಲುವು ಕಾಣುವ ಮೂಲಕ ಎರಡೂವರೆ ದಿನಗಳಲ್ಲೇ ಪಂದ್ಯ ಕೊನೆಗೊಂಡಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಕಗಿಸೋ ರಬಾಡ ದಕ್ಷಿಣ ಆಫ್ರಿಕಾ ಪರ 5-34 ಸ್ಕೋರ್ ಮಾಡಿದ್ದರೆ ರೋಸ್ಟನ್ ಚೇಸ್ ತಮ್ಮ 62 ರನ್‌ಗಳೊಂದಿಗೆ ವೆಸ್ಟ್ ಇಂಡೀಸ್‌ ಗೆ ತಕ್ಕಷ್ಟು ಬಲ ತುಂಬಿದ್ದರು.

ರಬಾಡಾ ಸಹವರ್ತಿ ವೇಗದ ಬೌಲರ್ ಲುಂಗಿ ನಗಿದಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದರೆ ಅನ್ರಿಕ್ ನಾರ್ಟ್ಜೆ ಏಳು ವಿಕೆಟ್‌ಗಳನ್ನು ಗಳಿಸಿದರು.

ಇನ್ನು ನಾಯಕನಾಗಿ ತನ್ನ ಮೊದಲ ಟೆಸ್ಟ್‌ನಲ್ಲಿ ಡೀನ್ ಎಲ್ಗರ್ ಗೆಲುವಿನ ಶುಭಾರಂಬ ಮಾಡಿದ್ದಾರೆ.

ಎರಡನೇ ಮತ್ತು ಅಂತಿಮ ಟೆಸ್ಟ್ ಶುಕ್ರವಾರದಿಂದ ಸೇಂಟ್ ಲೂಸಿಯಾದಲ್ಲಿ ನಡೆಯಲಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!