ಕ್ರಿಕೆಟ್

ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್: ಪಂದ್ಯದ ಮೊದಲ ದಿನದಾಟ ಸಂಪೂರ್ಣ ಮಳೆಗಾಹುತಿ

Srinivasamurthy VN

ಸೌಥ್ಯಾಂಪ್ಟನ್: ಭಾರೀ ನಿರೀಕ್ಷೆ ಮೂಡಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ದಿನದಾಟ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿದೆ. 

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟ ರದ್ದಾಗಿದ್ದು,  ಬಿಟ್ಟು ಬಿಟ್ಟು ಆಗಮಿಸುತ್ತಿದ್ದ ಮಳೆಯಿಂದಾಗಿ ಪಂದ್ಯವನ್ನು ಆರಂಭಿಸುವ ಯಾವ ಅವಕಾಶಗಳು ಕೂಡ ಆಯೋಜಕರಿಗೆ ದೊರೆಯಲಿಲ್ಲ. ಟಾಸ್ ಅನ್ನು ಕೂಡ ಪದೇ ಪದೇ  ಮುಂದೂಡಲಾಗಿತ್ತು. ನಂತರ ಭಾರತೀಯ ಕಾಲಮಾನ 7:20ರ ವೇಳೆಗೆ ವಾತಾವರಣವನ್ನು ಪರಿಶೀಲಿಸಿದ ಅಂಪೈರ್ ಗಳು ನಂತರ ಮೊದಲ ದಿನದಾಟವನ್ನು ಅಧಿಕೃತವಾಗಿ ಮುಂದೂಡಿದರು.

ನಿಗದಿಯಂತೆ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಹವಾಮಾನ ಇದಕ್ಕೆ ಅವಕಾಶವನ್ನು ಮಾಡಿಕೊಡಲೇ ಇಲ್ಲ. ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದು ಮಳೆ ನಿಂತರೂ ಪಂದ್ಯವನ್ನು ಮುಂದುವರಿಸಲು ಸಾಧ್ಯವಿರಿಲಿಲ್ಲ ಎಂದು ಪರಿಗಣಿಸಿದ ನಂತರ ಮೊದಲ  ದಿನದಾಟವನ್ನು ರದ್ದುಗೊಳಿಸಿದರು.  

ಮೀಸಲು ದಿನ
ಇನ್ನು ಐತಿಹಾಸಿಕ ಪಂದ್ಯವಾಗಿರುವ ಕಾರಣ ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಗೊಳಿಸಲಾಗಿದೆ. ಹೀಗಾಗಿ ಆರನೇ ದಿನವೂ ಪಂದ್ಯವನ್ನು ಮುಂದುವರಿಯುವುದು ಖಚಿತವಾಗಿದೆ. ಮತ್ತೊಂದೆಡೆ ಎರಡನೇ ದಿನವಾದರೂ ಪಂದ್ಯ ಮುಂದುವರಿಸಲು ಅವಕಾಶ ದೊರೆಯುತ್ತದೆಯೇ ಎಂಬ ಅನುಮಾನ  ಅಭಿಮಾನಿಗಳನ್ನು ಕಾಡುತ್ತಿದೆ.

SCROLL FOR NEXT