ಕ್ರಿಕೆಟ್

ಡಬ್ಲ್ಯುಟಿಸಿ ಫೈನಲ್: 5ನೇ ದಿನ ನ್ಯೂಜಿಲೆಂಡ್ ಗೆ ಮುನ್ನಡೆ, ಶಮಿಗೆ 4 ವಿಕೆಟ್

Raghavendra Adiga

ಸೌತಾಂಪ್ಟನ್ಳ್: ವೇಗಿಗಳಾದ ಮೊಹಮ್ಮದ್ ಶಮಿ (76ಕ್ಕೆ 4) ಹಾಗೂ ಇಶಾಂತ್ ಶರ್ಮಾ (48ಕ್ಕೆ 3) ಇವರುಗಳ ಬಿಗುವಿನ ದಾಳಿಯ ಫಲದಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನು 249 ರನ್ ಗಳಿಗೆ ಕಟ್ಟಿ ಹಾಕಿದೆ. ಕಿವೀಸ್ 32 ರನ್ ಗಳ ಮುನ್ನಡೆ ಸಾಧಿಸಿದೆ.

ಐದನೇ ದಿನವಾರ ಮಂಗಳವಾರ 2 ವಿಕೆಟ್ ಗೆ 101 ರನ್ ಗಳಿಂದ ಆಟ ಮುಂದುವರಿಸಿದ ನ್ಯೂಜಿಲೆಂಡ್ ಪಡೆ 249 ರನ್ ಗಳಿಗೆ ಆಲೌಟ್ ಆಯಿತು. 

ಭಾರತದ ಮೊಹಮ್ಮದ್ ಶಮಿ ಗರಿಷ್ಠ ನಾಲ್ಕು ವಿಕೆಟ್ ಪಡೆವ ಮೂಲಕ ಕಿವೀಸ್ ಭಾರೀ ಮುನ್ನಡೆಯನ್ನು ತಡೆದರು. 

ಇನ್ನು ಶಮಿ ಹೊರತಾಗಿ  ಇಶಾಂತ್ ಶರ್ಮಾ ಮೂರು, ಆರ್ ಅಶ್ವಿನ್ ಎರಡು ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು. 

ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೇ , ನಾಯಕ ಕೇನ್ ವಿಲಿಯಮ್ಸನ್ ಉತ್ತಮ ರನ್ ಗಳಿಸಿದ್ದರು. ಅಲ್ಲದೆ ಟಿಮ್ ಸೌಥಿ ಸಹ ತಂಡಕ್ಕೆ ನೆರವಾಗಿದ್ದರು.

ಐದನೇ ದಿನ ಮಳೆಯಿಂದಾಗಿ ಅರ್ಧ ಗಂಟೆ ತಡವಾಗಿ ಪ್ರಾರಂಭವಾಗಿದ್ದ ಪಂದ್ಯದ ಮೊದಲ ಸೆಷನ್ ನಲ್ಲಿ ಕಿವೀಸ್ 23 ಓವರ್‌ಗಳಲ್ಲಿ 34 ರನ್  ಗಳಿಸಿದರೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆ ನಂತರ ಎಚ್ಚರಿಕೆ ಆಟ ಪ್ರದರ್ಶಿಸಿದ್ದ ಕಿವೀಸ್ ತಂಡ ಒಂದು ಗಂಟೆ ಕಾಲ ಉತ್ತಮವಾಗಿಯೇ ಆಡಿತಾದರೂ ನಂತರದಲ್ಲಿ ವಿಕೆಟ್ ಗಳು ಒಂದರ ಹಿಂದೊಂದು ಉರುಳಿದವು.

ಇದಕ್ಕೆ ಮುನ್ನ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ್ದರೆ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 217 ರನ್ ಗಳಿಗೆ ಆಲೌಟ್ ಆಗಿತ್ತು.

SCROLL FOR NEXT