ಕ್ರಿಕೆಟ್

ಟಿ20 ವಿಶ್ವ ಕಪ್ ಯುಎಇಗೆ ಸ್ಥಳಾಂತರ; ಇಂದು ಐಸಿಸಿಗೆ ಮಾಹಿತಿ ರವಾನೆ: ಬಿಸಿಸಿಐ

Vishwanath S

ನವದೆಹಲಿ: ಟಿ20 ವಿಶ್ವಕಪ್‌ನ ಅನ್ನು ಯುಎಇಗೆ ಸ್ಥಳಾಂತರಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜೈ ಶಾ ಸೋಮವಾರ ಖಚಿತಪಡಿಸಿದ್ದಾರೆ.

'ನಾವು ಟಿ20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸುತ್ತಿರುವುದಾಗಿ ಇಂದು ಐಸಿಸಿಗೆ ತಿಳಿಸುತ್ತೇವೆ. ಪಂದ್ಯಾವಳಿಯ ದಿನಾಂಕಗಳನ್ನು ಐಸಿಸಿ ನಿರ್ಧರಿಸುವ ಅಗತ್ಯವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಎಎನ್ಐಗೆ ತಿಳಿಸಿದರು.

ಟಿ20 ವಿಶ್ವಕಪ್ ಭಾರತದಿಂದ ಹೊರ ನಡೆದರೂ ಆಯೋಜನೆಯ ಹಕ್ಕುಗಳನ್ನು ಬಿಸಿಸಿಐ ಉಳಿಸಿಕೊಳ್ಳುತ್ತದೆ ಎಂದು ಐಸಿಸಿ ಸ್ಪಷ್ಟಪಡಿಸಿತ್ತು. ಏತನ್ಮಧ್ಯೆ, ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 14ನೇ ಆವೃತ್ತಿಯು ಯುಎಇಯಲ್ಲಿಯೇ ಪೂರ್ಣಗೊಳ್ಳಲಿದೆ. ಐಪಿಎಲ್ ಸೆಪ್ಟೆಂಬರ್ 19ರಿಂದ ಪ್ರಾರಂಭವಾಗಲಿದ್ದು ಫೈನಲ್ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ.

ಸಿಪಿಡಬ್ಲ್ಯುಐ, ಬಿಸಿಸಿಐ, ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಐಪಿಎಲ್‌ನ ಎರಡನೇ ಹಂತಕ್ಕೆ ಅನುಗುಣವಾಗಿ ತಿರುಚಿದ ಸಿಪಿಎಲ್ ವೇಳಾಪಟ್ಟಿಗಾಗಿ ಮಾತುಕತೆ ನಡೆಸುತ್ತಿವೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ರಿಕಿ ಸ್ಕೆರಿಟ್ ಈಗಾಗಲೇ ಖಚಿತಪಡಿಸಿದ್ದಾರೆ. ಮೊದಲಿಗೆ ಆಗಸ್ಟ್ 28ರಂದು ಪ್ರಾರಂಭವಾಗಬೇಕಿದ್ದ ಸಿಪಿಎಲ್ ಈಗ ಆಗಸ್ಟ್ 26 ಮತ್ತು ಸೆಪ್ಟೆಂಬರ್ 15ರ ನಡುವೆ ಸೇಂಟ್ ಕಿಟ್ಸ್ ಮತ್ತು ನೆವಿಸ್‌ನಲ್ಲಿ ನಡೆಯಲಿದೆ.

SCROLL FOR NEXT