ಕ್ರಿಕೆಟ್

ಯಜುವೇಂದ್ರ ಚಾಹಲ್ ತಂದೆ, ತಾಯಿಗೆ ಕೊರೋನಾ, ತಂದೆಯ ಸ್ಥಿತಿ ಗಂಭೀರ

Lingaraj Badiger

ನವದೆಹಲಿ: ಟೀಮ್ ಇಂಡಿಯಾ ಯುವ ಆಟಗಾರ ಯಜುವೇಂದ್ರ ಚಾಹಲ್ ಅವರ ತಂದೆ ಮತ್ತು ತಾಯಿ ಕೊರೋನಾ ಸೋಂಕಿಗೆ  ಒಳಗಾಗಿದ್ದಾರೆ.

ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು, ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಚಾಹಲ್ ಅವರ ತಾಯಿ ಸೋಂಕಿನ ಲಘು ಲಕ್ಷಣಗಳೊಂದಿಗೆ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಚಾಹಲ್ ಅವರ ತಂದೆಗೆ ಹೆಚ್ಚಿನ ರೋಗ ಲಕ್ಷಣಗಳು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಧನಶ್ರೀ  ಮಾತನಾಡಿ, “ನಮ್ಮ ಮಾವ, ಅತ್ತೆಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಅತ್ತೆಯವರಲ್ಲಿ ಲಘು ರೋಗಲಕ್ಷಣ ಕಂಡುಬಂದಿರುವ ಕಾರಣ ಹೋಂ ಐಸೋಲೇಷನ್‌ ನಲ್ಲಿದ್ದಾರೆ. ಆದರೆ ಮಾವನವರ ಸ್ಥಿತಿ ಸ್ವಲ್ಪ ಗಂಭೀರವಾಗಿರುವ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇವರನ್ನು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಹೊರಗೆ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. "ಎಲ್ಲರೂ ಮನೆಯಲ್ಲಿ ಇರಿ, ಮಾಸ್ಕ್‌ಧರಿಸಿ ಸುರಕ್ಷಿತವಾಗಿರಿ" ಎಂದು ಹೇಳಿದ್ದಾರೆ. ಇತ್ತೀಚೆಗೆ ಮಾಜಿ ಕ್ರಿಕೆಟಿಗರಾದ ಪಿಯೂಷ್ ಚಾವ್ಲಾ, ಆರ್.ಪಿ.ಸಿಂಗ್ ಅವರ ತಂದೆಯರು ಕೊರೋನಾದಿಂದ ಮೃತಪಟ್ಟಿದ್ದರು.

ಐಪಿಎಲ್‌ನ 14ನೇ ಆವೃತ್ತಿ ಅಮಾನತುಗೊಳಿಸಿದ್ದರಿಂದ ಚಾಹಲ್ ಪ್ರಸ್ತುತ ಮನೆಯಲ್ಲಿದ್ದಾರೆ. ಆದರೆ, ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಚಾಹಲ್ ಆಯ್ಕೆಯಾಗಿಲ್ಲ. ಆದರೆ, ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ, ಟಿ 20 ಸರಣಿಯಲ್ಲಿ ಚಾಹಲ್ ಆಡುವ ಅವಕಾಶಗಳಿವೆ.

SCROLL FOR NEXT