ಕ್ರಿಕೆಟ್

ಇಂಗ್ಲೆಂಡ್ ಆರೋಗ್ಯ ಇಲಾಖೆಯಿಂದ ಟೀಂ ಇಂಡಿಯಾಗೆ ಎರಡನೇ ಡೋಸ್ ಕೋವಿಡ್-19 ಲಸಿಕೆ

Nagaraja AB

ನವದೆಹಲಿ: ಇಂಗ್ಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ
ಇಂಗ್ಲೆಂಡ್ ತೆರಳಲು ಸಿದ್ಧತೆಯಲ್ಲಿ ತೊಡಗಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಇಂಗ್ಲೆಂಡ್ ಆರೋಗ್ಯ ಇಲಾಖೆಯಿಂದ ಎರಡನೇ ಡೋಸ್ ಹಾಕಲಾಗುತ್ತದೆ.

ಇಂಗ್ಲೆಂಡ್ ಆರೋಗ್ಯ ಇಲಾಖೆಯ ಮಾರ್ಗದರ್ಶನದಡಿಯಲ್ಲಿ ಟೀಂ ಇಂಡಿಯಾ ಆಟಗಾರರು ಎರಡನೇ ಡೋಸ್ ಕೋವಿಡ್ -19
ಲಸಿಕೆ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ತಿಳಿಸಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದ ನಂತರ ಟೀಂ ಇಂಡಿಯಾ ಈಗಾಗಲೇ 
ಮೊದಲ ಡೋಸ್ ಪಡೆದುಕೊಂಡಿದೆ. ನಿಯಮಗಳ ಪ್ರಕಾರ ಎರಡನೇ ಲಸಿಕೆ ಪಡೆಯಲು ಆಟಗಾರರು ಆರ್ಹರಾದ್ದಲ್ಲಿ ಇಂಗ್ಲೆಂಡ್
ಆರೋಗ್ಯ ಇಲಾಖೆಯಿಂದ ಎರಡನೇ ಡೋಸ್ ಲಸಿಕೆ ಹಾಕಲಾಗುವುದು ಎಂದು ಮೂಲಗಳು ಹೇಳಿವೆ.

ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ಗೆ ತೆರಳುವ ಮುನ್ನ ಬಿಸಿಸಿಐ ಎಲ್ಲಾ ಯೋಜನೆಯನ್ನು ಮಾಡಲಿದೆ. ನಾಳೆ ಮುಂಬೈಯಲ್ಲಿ
ಸೇರುವ ಮುನ್ನ ಎಲ್ಲಾ ಆಟಗಾರರಿಗೂ ಮೂರು ಆರ್ ಟಿ- ಪಿಸಿಆರ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ಮುಂಬೈಯಲ್ಲಿ ಎರಡು ವಾರಗಳ ಕ್ವಾರಂಟೈನ್ ಪೂರ್ಣಗೊಳಿಸಿದ ಬಳಿಕ ಇಂಗ್ಲೆಂಡ್ ಮತ್ತೆ 10 ದಿನಗಳ ಕ್ವಾರಂಟೈನ್ ನಲ್ಲಿ ಟೀ ಇಂಡಿಯಾ ಆಟಗಾರರು ಇರಬೇಕಾಗುತ್ತದೆ. 

SCROLL FOR NEXT