ಬಡಗಿ ಕೆಲಸ ಮಾಡುತ್ತಿರುವ ಕ್ಸೇವಿಯರ್ ಡೊಹೆರ್ಟಿ 
ಕ್ರಿಕೆಟ್

ಹೊಟ್ಟೆಪಾಡಿಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಕ್ಸೇವಿಯರ್ ಡೊಹೆರ್ಟಿ ಬಡಗಿ ಕೆಲಸ!

ಭಾರತದಲ್ಲಿ ಕ್ರಿಕೆಟ್ ಕ್ರೀಡೆಗಿರುವ ಆದರಣೆ, ಪ್ರತಿಷ್ಟೆ ಕುರಿತು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಐಪಿಎಲ್ ನಿಂದಾಗಿ ಅದೆಷ್ಟೋ ಮಂದಿ ದೇಶೀಯ ಹಾಗೂ ವಿದೇಶಿ ಕ್ರಿಕೆಟಿಗರು ಬೆಳಕಿಗೆ ಬರುತ್ತಿದ್ದಾರೆ. 

ಕ್ಯಾನ್‌ಬೆರಾ: ಭಾರತದಲ್ಲಿ ಕ್ರಿಕೆಟ್ ಕ್ರೀಡೆಗಿರುವ ಆದರಣೆ, ಪ್ರತಿಷ್ಟೆ ಕುರಿತು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಐಪಿಎಲ್ ನಿಂದಾಗಿ ಅದೆಷ್ಟೋ ಮಂದಿ ದೇಶೀಯ ಹಾಗೂ ವಿದೇಶಿ ಕ್ರಿಕೆಟಿಗರು ಬೆಳಕಿಗೆ ಬರುತ್ತಿದ್ದಾರೆ. ಹರಾಜಿನಲ್ಲಿ ಅವರಿಗೆ ಒಳ್ಳೆಯ ಬೇಡಿಕೆಯಿದೆ. ಪ್ರತಿಭೆ ಸಾಬೀತುಪಡಿಸಿದರೆ ಕೋಟಿ, ಕೋಟಿ ಗಳಿಸುವ ಅವಕಾಶವಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ 
ಹೇಳಿದ ಕೆಲವರು ಇನ್ನೂ ಲೀಗ್‌ನಲ್ಲಿ ಆಡುತ್ತಿದ್ದಾರೆ.

ಆದರೆ, ಕೆಲ ಮಂದಿ ಕ್ರಿಕೆಟ್ಟಿಗರ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್‌ ತನ್ನ ಹೊಟ್ಟೆಪಾಡಿಗಾಗಿ ಬಡಗಿಯಾಗಿ ಬದಲಾಗಿದ್ದಾರೆ. ಕ್ಸೇವಿಯರ್ ಡೊಹೆರ್ಟಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ನಾಲ್ಕು ವರ್ಷಗಳು ಕಳೆದಿವೆ. 2015 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ಅವರು ಪಾಲುದಾರರಾಗಿದ್ದರು.ಎಡಗೈ ಸ್ಪಿನ್ನರ್ ಕ್ಸೇವಿಯರ್ ಡೊಹೆರ್ಟಿ 2001-02ರ ಹಂಗಾಮಿನಲ್ಲಿ ಮೊದಲ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು ಸುಮಾರು 17 ವರ್ಷಗಳ ಕಾಲ ಕ್ರಿಕೆಟ್‌ ವೃತ್ತಿಯನ್ನು ಮುಂದುವರೆಸಿದ್ದರು.

 71 ಪ್ರಥಮ ದರ್ಜೆ, 176 ಲಿಸ್ಟ್ ಎ, 74 ಟಿ 20 ಪಂದ್ಯಗಳನ್ನು ಆಡಿದ್ದ ಅವರು ಒಟ್ಟು 415 ವಿಕೆಟ್ ಪಡೆದಿದ್ದರು. ಕೊನೆಯ ಬಾರಿಗೆ ಅವರು ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿ 2015 ರಲ್ಲಿ ಕಾಣಿಸಿಕೊಂಡಿದ್ದರು. ಆಸ್ಟ್ರೇಲಿಯಾದ ಮಾಜಿ ಎಡಗೈ ಸ್ಪಿನ್ನರ್ ಈವರೆಗೆ ಆಸ್ಟ್ರೇಲಿಯಾ ಪರ 4 ಟೆಸ್ಟ್ ಹಾಗೂ 60 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಮಾರ್ಚ್ 2020 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ  ಆಸ್ಟ್ರೇಲಿಯನ್ ಲೆಜೆಂಡ್ಸ್ ಪರ ಕೊನೆಯ ಬಾರಿ ಆಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT