ಕ್ರಿಕೆಟ್

ಭಾರತವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಬಿಗ್ ಬ್ಯಾಶ್ ನಲ್ಲಿ ಆಡಲಿರುವ ಮೊದಲ ಭಾರತೀಯ!

Vishwanath S

ಮೆಲ್ಬೋರ್ನ್: ಆಸ್ಟ್ರೇಲಿಯಾದ T20 ಲೀಗ್- ಬಿಗ್ ಬ್ಯಾಷ್ ನಲ್ಲಿ ಇದೀಗ ಭಾರತದ ಆಟಗಾರನನ್ನು ನೋಡಬಹುದು. ಹೌದು ಲೀಗ್‌ ನಲ್ಲಿ ಆಡಲು ಮೊದಲ ಬಾರಿಗೆ ಭಾರತದ ಪುರುಷ ಕ್ರಿಕೆಟಿಗನೊಬ್ಬ ಸಹಿ ಮಾಡಿದ್ದಾರೆ. 

ಹೌದು, 2012ರಲ್ಲಿ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ನಾಯಕ ಉನ್ಮುಕ್ತ್ ಚಂದ್ ಇದೀಗ ಬಿಬಿಎಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉನ್ಮುಕ್ತ್ ಚಂದ್ ಕೆಲ ತಿಂಗಳ ಹಿಂದೆಯಷ್ಟೇ ಭಾರತ ತೊರೆದು ಅಮೆರಿಕಾಗೆ ತೆರಳಿದ್ದರು.

ಮೆಲ್ಬೋರ್ನ್ ರೆನೆಗೇಡ್ಸ್ ಉನ್ಮುಕ್ತ್ ಚಂದ್ ಅವರನ್ನು ಕಣಕ್ಕಿಳಿಸಲಿದೆ. ಈ ಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಚಂದ್ ಪಾತ್ರರಾಗಲಿದ್ದಾರೆ. ಭಾರತದ ಮಹಿಳಾ ಆಟಗಾರರು ಬಿಗ್ ಬ್ಯಾಷ್ ಲೀಗ್‌ನಲ್ಲಿ ನಿರಂತರವಾಗಿ ಆಡುತ್ತಿದ್ದರೂ, ಭಾರತದ ಪುರುಷ ಕ್ರಿಕೆಟಿಗರೊಬ್ಬರು ಈ ಲೀಗ್‌ನಲ್ಲಿ ಆಡುತ್ತಿರುವುದು ಇದೇ ಮೊದಲು.

ಭಾರತದ ಪುರುಷ ಆಟಗಾರರಿಗೆ ಬೇರೆ ಯಾವುದೇ ವಿದೇಶಿ ಲೀಗ್‌ನಲ್ಲಿ ಆಡಲು ಅವಕಾಶವಿಲ್ಲ. ಇನ್ನು ಭಾರತೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಚಂದ್ ಅಮೆರಿಕದಲ್ಲಿ ನೆಲೆಸಿದ್ದರು. ಹೀಗಾಗಿಯೇ ಬಿಬಿಎಲ್‌ನಲ್ಲಿ ಆಡಲು ಸಾಧ್ಯವಾಯಿತು. 'ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ಸುಲಭದ ನಿರ್ಧಾರವಾಗಿರಲಿಲ್ಲ.

ನನ್ನ ದೇಶಕ್ಕಾಗಿ ಮತ್ತೆ ಆಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಆದರೆ ನಾನು ಅಮೆರಿಕದೊಂದಿಗೆ ಆಡುವುದನ್ನು ಆನಂದಿಸಿದೆ. ಅದು ಪ್ರತಿದಿನ ಉತ್ತಮಗೊಳ್ಳುತ್ತಿದೆ. ನಾನು ಈಗ ಪ್ರತಿ ಲೀಗ್‌ನಲ್ಲಿ ಆಡಬಲ್ಲೆ. ಇದು ನನ್ನ ಪಾಲಿಗೆ ದೊಡ್ಡ ಸಾಧನೆ' ಎಂದು ಚಂದ್ ಹೇಳಿಕೊಂಡಿದ್ದಾರೆ.
 

SCROLL FOR NEXT