ಕ್ರಿಕೆಟ್

ಟಿ-20 ವಿಶ್ವಕಪ್; ಭಾರತದ ಪಾಲಿಗೆ ಸೆಮಿಫೈನಲ್ ಬಾಗಿಲು ಇನ್ನೂ ತೆಗೆದಿದೆಯೇ?, ಮುಂದಿನ ಸವಾಲುಗಳೇನು?

Lingaraj Badiger

ಬೆಂಗಳೂರು: ಟಿ-20 ವಿಶ್ವಕಪ್ ನಲ್ಲಿ ಭಾರತ, ಅಫ್ಘಾನಿಸ್ತಾನದ ವಿರುದ್ಧ ಭಾರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಂಡಿದೆ. ಆದ್ರೆ, ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಹೋಗಬಹುದೇ? ಕ್ರಿಕೆಟ್ ತಜ್ಞರ ಲೆಕ್ಕಾಚಾರಗಳು ಏನು ಹೇಳ್ತಿವೆ ನೋಡೋಣ.

ಟ್ವೆಂಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮೊದಲು ಗೆಲುವು ದಾಖಲಿಸಿದೆ. ನಿನ್ನೆ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ 66 ರನ್ ಗಳ ಅಂತರದಿಂದ ಅಫ್ಘಾನಿಸ್ತಾನವನ್ನು ಸೋಲಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಖಾತೆ ತೆರೆದಿದ್ದು, 2 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಈ ದೊಡ್ಡ ಗೆಲುವಿನೊಂಂದಿಗೆ ನೆಗಟಿವ್‌ನಲ್ಲಿದ್ದ ಭಾರತ, ಪಾಸಿಟಿವ್ ನೆಟ್ ರನ್ ರೇಟ್‌ಗೆ ಬಂದು ನಿಂತಿದೆ. ಟೀಮ್ ಇಂಡಿಯಾ ಇದುವರೆಗೂ ಮೂರು ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಗೆದ್ದಿದೆ. ಇದೀಗ ನೆಟ್ ರನ್ ರೇಟ್ +0.073 ಆಗಿದೆ.

ಟೀಮ್ ಇಂಡಿಯಾ ಸೆಮಿಫೈನಲ್ ತಲುಪಬಹುದೇ?
ಭಾರತ ನಿವ್ವಳ ರನ್ ರೇಟ್‌ನ್ನು ಪಾಸಿಟಿವ್‌ಗೆ ತರಲು 63 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಂದ ಅಫ್ಘಾನಿಸ್ತಾನವನ್ನು ಸೋಲಿಸಬೇಕಾಗಿತ್ತು. ಈಗ ಭಾರತ ಅದನ್ನೇ ಮಾಡಿದ್ದು, ಟೀಮ್ ಇಂಡಿಯಾದ ಸದ್ಯದ ನೆಟ್ ರನ್ ರೇಟ್ +0.073 ಆಗಿದೆ.

ಆದ್ರೆ, ಭಾರತದ ಮುಂದಿರುವ ಸವಾಲುಗಳು ಬಹಳ ಕಠಿಣಮಟ್ಟದ್ದಾಗಿದೆ. ಕೊಹ್ಲಿ ಪಡೆಯ ಭವಿಷ್ಯ ಅಫ್ಘಾನಿಸ್ತಾನದ ಮೇಲೆ ಅವಲಂಬಿತವಾಗಿದೆ. ನ್ಯೂಜಿಲೆಂಡ್ ಟೀಮ್ ವಿರುದ್ಧ ಅಫ್ಘಾನಿಸ್ತಾನ ಗೆದ್ದರೆ, ನಮಿಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಲೆಕ್ಕಾಚಾರ ಹಾಕಬೇಕಾಗುತ್ತದೆ.

ಭಾರತದ ಪಾಲಿಗೆ 2 ಒಳ್ಳೆಯ ವಿಚಾರಗಳು ಏನೆಂದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್ ಅಂತರದಿಂದ ಅಫ್ಘಾನಿಸ್ತಾನ ಗೆದ್ದರೆ ಸಾಕು ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಇನ್ನೊಂದು ಒಳ್ಳೆಯ ವಿಚಾರ ಏನೆಂದರೆ ಟೀಮ್ ಇಂಡಿಯಾದ ಲೀಗ್ ಪಂದ್ಯಗಳು ಕೊನೆಯ ಹಂತದಲ್ಲಿವೆ. ಇದರಿಂದ ಎಷ್ಟು ನೆಟ್ ರನ್ ರೇಟ್ ಗುರಿಯಾಗಿರಿಸಿಕೊಂಡು ಗೆಲುವು ಸಾಧಿಸಬೇಕು ಅನ್ನೋದರ ಬಗ್ಗೆ ಲೆಕ್ಕಾಚಾರ ಹಾಕಬಹುದಾದ ಅವಕಾಶ ಭಾರತ ತಂಡಕ್ಕೆ ಇದೆ.

ಭಾರತದ ಮುಂಬರುವ ಪಂದ್ಯಗಳು:
ನವಂಬರ್ 5 - ಸ್ಕಾಟ್ಲೆಂಡ್ ವಿರುದ್ಧ
ನವಂಬರ್ 8 - ನಮೀಬಿಯಾ ವಿರುದ್ಧ
ಗ್ರೂಪ್-2 ರ ಉಳಿದ ಪಂದ್ಯಗಳು:
ನವೆಂಬರ್ 5 - ನ್ಯೂಜಿಲೆಂಡ್ ವಿರುದ್ಧ ನಮೀಬಿಯಾ
ನವೆಂಬರ್ 7 - ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ
ನವೆಂಬರ್ 7 -ಪಾಕಿಸ್ತಾನ ವಿರುದ್ಧ ಸ್ಕಾಟ್ಲೆಂಡ್

ರಂಗೇರಿದ ಭಾರತದ ಡ್ರೆಸ್ಸಿಂಗ್ ರೂಮ್
ಪಾಕ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮ್ಯಾಚ್ ಗಳಲ್ಲಿ ಟೀಮ್ ಇಂಡಿಯಾ ಸಂಪೂರ್ಣವಾಗಿ ತನ್ನ ಲಯದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದ್ರೆ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ರಂಗೇರಿತ್ತು. ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಜೋಡಿ ಉತ್ತಮ ಆರಂಭ ಮಾಡಿದ್ರು. ನಂತರ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ಮಾಡಿದರು.

ಮತ್ತೊಂದೆಡೆ ಬೌಲಿಂಗ್ ವಿಚಾರಕ್ಕೆ ಬಂದ್ರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿದ್ದ ಮೊಹಮ್ಮದ್ ಶಮಿ ಕೂಡ ವಿಕೆಟ್ ಪಡೆದುಕೊಂಡ್ರು. ಜೊತೆಗೆ ರವಿಚಂದ್ರನ್ ಅಶ್ವಿನ್ 5 ವರ್ಷಗಳ ನಂತರ ಟಿ 20ಗೆ ಪಂದ್ಯಗಳಿಗೆ ಮರಳಿದ್ದು, ಬಹಳ ಅನುಕೂಲವಾಗಿದೆ. ಅಶ್ವಿನ್ ತಮ್ಮ 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದರು.

SCROLL FOR NEXT