ಕ್ರಿಕೆಟ್

ಐಸಿಸಿಯ ಅತ್ಯಂತ ಮೌಲ್ಯಯುತ ತಂಡಕ್ಕೆ ಬಾಬರ್ ನಾಯಕ: ಭಾರತಕ್ಕೆ ಕೈತಪ್ಪಿದ ಅವಕಾಶ! 

Srinivas Rao BV

ದುಬೈ: ಐಸಿಸಿ ಟಿ20 ವಿಶ್ವಕಪ್ ಗಾಗಿ ತನ್ನ ತಂಡವನ್ನು ಪ್ರಕಟಿಸಿದ್ದು, ಈ ತಂಡಕ್ಕೆ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. 

ಈ ತಂಡದಲ್ಲಿ ಭಾರತದ ಯಾವೊಬ್ಬ ಕ್ರಿಕೆಟಿಗನೂ ಸ್ಥಾನ ಪಡೆದಿಲ್ಲ. 6 ತಂಡಗಳ ಆಟಗಾರರ ಪೈಕಿ ಕೆಲವರನ್ನು ಐಸಿಸಿ ಟಿ20 ವಿಶ್ವಕಪ್ ತಂಡವನ್ನು ರಚಿಸಿದೆ. 

ವಿಶ್ವಕಪ್ ನ ಚಾಂಪಿಯನ್ ತಂಡ ಆಸ್ಟ್ರೇಲಿಯಾ, ರನ್ನರ್ ಅಪ್ ತಂಡ ನ್ಯೂಜಿಲ್ಯಾಂಡ್, ಸೆಫೈನಲ್ ನಲ್ಲಿ ಗೆದ್ದಿದ್ದ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ, ದಕ್ಷಿಣ ಆಫ್ರಿಕಾಗಳ ತಂಡವನ್ನು ಆಯ್ಕೆ ಮಾಡಲಾಗಿದೆ. 

ಪ್ರಾರಂಭಿಕ ಆಟಗಾರರಾಗಿ ಡೇವಿಡ್ ವಾರ್ನರ್, ಲೆಗ್ ಸ್ಪಿನ್ನರ್ ಆಡಮ್ ಝಂಪಾ, ಸೀಮರ್ ಜೋಶ್ ಹ್ಯಾಜಲ್‌ವುಡ್ ಈ ತಂಡದಲ್ಲಿದ್ದಾರೆ. 

ಇಂಗ್ಲೆಂಡ್ ನ ಜೋಸ್ ಬಟ್ಲರ್ ವಿಕೆಟ್ ಕೀಪರ್ ಆಗಿದ್ದರೆ, ಈ ತಂಡಕ್ಕೆ ಪಾಕಿಸ್ತಾನದ ಬಾಬರ್ ಆಜಮ್ ನಾಯಕರಾಗಿದ್ದು, ನ್ಯೂಜಿಲ್ಯಾಂಡ್ ನ ಲೆಫ್ಟ್ ಆರ್ಮ್ ಬೌಲರ್ ಟ್ರೆಂಟ್ ಬೌಲ್ಟ್, ಶ್ರೀಲಂಕಾದ ಸ್ಟಾರ್ ವನಿಂದು ಹಸರಂಗ ಬೌಲಿಂಗ್ ವಿಭಾಗದಲ್ಲಿದ್ದಾರೆ. 

ಐಸಿಸಿಯ ಪ್ರಕಾರ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರು, ಕಾಮೆಂಟೇಟರ್ ಗಳು ಪತ್ರಕರ್ತರು ಈ ತಂಡವನ್ನು ಆಯ್ಕೆ ಮಾಡಿದ್ದಾರೆ. 

ಟಿ20 ವಿಶ್ವಕಪ್-2021 ಐಸಿಸಿ ಪುರುಷರ ತಂಡ ಹೀಗಿದೆ

ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) ಜೋಸ್ ಬಟ್ಲರ್ (ವಿಕೆಟ್ ಕೀಪರ್ ಇಂಗ್ಲೆಂಡ್) ಬಾಬರ್ ಆಜಮ್ (ನಾಯಕ, ಪಾಕಿಸ್ತಾನ) ಚರಿತ್ ಅಸಲಂಕಾ (ಲಂಕಾ)  ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ) ಮೊಯಿನ್ ಅಲಿ (ಇಂಗ್ಲೆಂಡ್) ವನಿಂದು ಹಸರಂಗ (ಲಂಕಾ) ಆಡಮ್ ಝಂಪಾ (ಆಸ್ಟ್ರೇಲಿಯಾ) ಜೋಶ್ ಹ್ಯಾಜಲ್ವುಡ್ (ಆಸ್ಟ್ರೇಲಿಯಾ) ಟ್ರೆಂಟ್ ಬೌಲ್ಟ್ (ನ್ಯೂಜಿಲ್ಯಾಂಡ್) ಅನ್ರಿಚ್ ನಾರ್ಟ್ಜೆ (ದಕ್ಷಿಣ ಆಫ್ರಿಕಾ) ಶಾಹೀನ್ ಅಫ್ರಿದಿ 

SCROLL FOR NEXT