ಟೀಂ ಇಂಡಿಯಾ 
ಕ್ರಿಕೆಟ್

ಹಂದಿ ಮತ್ತು ಗೋಮಾಂಸ ಇಲ್ಲ: ಭಾರತೀಯ ಕ್ರಿಕೆಟಿಗರಿಗೆ 'ಹಲಾಲ್' ಮಾಂಸ, ಬಿಸಿಸಿಐ ಶಿಫಾರಸ್ಸಿಗೆ ತೀವ್ರ ಆಕ್ರೋಶ

ಟೀಂ ಇಂಡಿಯಾ ಆಟಗಾರರಿಗೆ ಹಲಾಲ್ ಮಾಂಸಹಾರವನ್ನು ನೀಡಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಡಿರುವ ಶಿಫಾರಸ್ಸಿಗೆ ಆಕ್ರೋಶ ವ್ಯಕ್ತವಾಗಿದೆ.

ನವದೆಹಲಿ: ಟೀಂ ಇಂಡಿಯಾ ಆಟಗಾರರಿಗೆ ಹಲಾಲ್ ಮಾಂಸಹಾರವನ್ನು ನೀಡಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಡಿರುವ ಶಿಫಾರಸ್ಸಿಗೆ ಆಕ್ರೋಶ ವ್ಯಕ್ತವಾಗಿದೆ. 

ಕ್ರಿಕೆಟಿಗರಿಗೆ ನೀಡಲಿರುವ ಊಟದ ಪಟ್ಟಿಯಲ್ಲಿ ಹಂದಿ ಮತ್ತು ದನದ ಮಾಂಸದ ಖಾದ್ಯಗಳನ್ನು ನೀಡುವಂತಿಲ್ಲ ಎಂದು ನಮೂದಿಸಲಾಗಿದೆ. ಇದಲ್ಲದೇ ಮಾಂಸಾಹಾರ ಸೇವನೆಗೆ ಏನೇ ಬಳಸಿದರೂ ಅದು ಹಲಾಲ್ ಆಗಿರಬೇಕು ಎಂದು ಸೂಚನೆ ನೀಡಲಾಗಿದೆ. 

ಇದಕ್ಕೆ ಬಿಜೆಪಿ ವಕ್ತಾರ ಮತ್ತು ವಕೀಲ ಗೌರವ್ ಗೋಯಲ್ ಆಕ್ಷೇಪ ಎತ್ತಿದ್ದಾರೆ. ಬಿಸಿಸಿಐ ಈ ನಿಯಮವನ್ನು ತಕ್ಷಣ ಹಿಂಪಡೆಯಬೇಕು. ಆಟಗಾರರಿಗೆ ತಮಗೆ ಇಷ್ಟವಿರುವ ಆಹಾರವನ್ನು ತಿನ್ನುವ ಹಕ್ಕಿದೆ. ಕೇವಲ ಹಲಾಲ್ ಮಾಂಸ ನೀಡಬೇಕು ಎಂದು ಕಡ್ಡಾಯ ಮಾಡಲು ಬಿಸಿಸಿಐ ಯಾರು? ಇದು ನಿಯಮಬಾಹಿರ ಎಂದು ಹೇಳಿದ್ದಾರೆ. 

ಭಾರತೀಯ ಕ್ರಿಕೆಟ್ ತಂಡಕ್ಕೆ ಫಿಟ್‌ನೆಸ್ ಅತ್ಯಂತ ಪ್ರಮುಖ ಮಾನದಂಡವಾಗಿದೆ, ಟೆಸ್ಟ್ ಮತ್ತು ಏಕದಿನ ನಾಯಕ ವಿರಾಟ್ ಕೊಹ್ಲಿ ತಂಡದ ಆಡಳಿತವನ್ನು ವಹಿಸಿಕೊಂಡ ನಂತರ ತಂಡದ ಆಟಗಾರರು ಸಂಪೂರ್ಣವಾಗಿ ಫಿಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಅಜೆಂಡಾವನ್ನು ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಸ್ಥಾನ ಪಡೆಯಲು ಯೋ-ಯೋ ಪರೀಕ್ಷೆಯನ್ನು ಅತ್ಯುನ್ನತ ಮಾನದಂಡದಲ್ಲಿ ಇಟ್ಟುಕೊಳ್ಳುವ ಸಂಸ್ಕೃತಿಯನ್ನು ಮುಂದಕ್ಕೆ ಸಾಗಿಸಿದವರು ವಿರಾಟ್.

ವಿಶ್ರಾಂತಿ ಪಡೆದಿರುವ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಮೊದಲ ಟೆಸ್ಟ್‌ಗೆ ಹಂಗಾಮಿ ನಾಯಕರಾಗಿದ್ದಾರೆ. ರಹಾನೆ ಉಪನಾಯಕ ಚೇತೇಶ್ವರ ಪೂಜಾರ ಜೊತೆಗಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ನಲ್ಲಿ ತಂಡವನ್ನು ಮುನ್ನಡೆಸಿದ ನಂತರ ಕೊಹ್ಲಿ ತಂಡಕ್ಕೆ ಮರಳಲಿದ್ದಾರೆ. ಆರಂಭಿಕ ಆಟಗಾರ ಹಾಗೂ ಭಾರತದ ನೂತನ ಟಿ20 ನಾಯಕ ರೋಹಿತ್ ಶರ್ಮಾಗೆ ಸಂಪೂರ್ಣ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT