ಕ್ರಿಕೆಟ್

T20 World Cup: ವೀಕ್ಷಣೆಯಲ್ಲಿ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಬರೆದ ಭಾರತ-ಪಾಕ್ ನಡುವಿನ ಪಂದ್ಯ

Srinivasamurthy VN

ದುಬೈ: ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಅತೀ ಹೆಚ್ಚು ವೀಕ್ಷಣೆ (Record viewership) ಪಡೆದ ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ದಾಖಲೆ ಬರೆದಿದ್ದು, ವೀಕ್ಷಣೆಯಲ್ಲಿ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಐಸಿಸಿ (ICC)ಮಾಹಿತಿ ನೀಡಿದೆ.

ಈ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಣೆಯಲ್ಲಿ ತಿಳಿಸಿದ್ದು, ಟಿ- 20 ವಿಶ್ವಕಪ್ ಭಾಗವಾಗಿ ಭಾರತ, ಪಾಕಿಸ್ತಾನ ತಂಡಗಳ ನಡುವೆ ನಡೆದ ಲೀಗ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಿದ ಪ್ರೇಕ್ಷಕರ ಸಂಖ್ಯೆ ಎಲ್ಲ ದಾಖಲೆಗಳನ್ನು ಮುರಿದಿದೆ. ಟಿ ವಿ ಮೂಲಕ ವಿಶ್ವದಾದ್ಯಂತ 16 ಕೋಟಿ 70 ಲಕ್ಷ ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಅಲ್ಲದೇ 15.9 ಬಿಲಿಯನ್ ನಿಮಿಷಗಳಷ್ಟು ಕಾಲ ವೀಕ್ಷಣೆಯಾಗಿದೆ ಎಂದು ಸ್ಟಾರ್ ಇಂಡಿಯಾ ನೆಟ್‌ವರ್ಕ್ ತಿಳಿಸಿದೆ.

ಟಿ- 20 ವಿಶ್ವಕಪ್‌ ಇತಿಹಾಸದಲ್ಲಿ ಇದು ಹೆಚ್ಚು ಮಂದಿ ವೀಕ್ಷಸಿದ ಪಂದ್ಯವಾಗಿ ಚರಿತ್ರೆ ನಿರ್ಮಿಸಿದೆ. 2016ರಲ್ಲಿ ಟಿ20 ವಿಶ್ವಕಪ್‌ ನಲ್ಲಿ ಭಾರತ, ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯ ವೀಕ್ಷಕರ ಸಂಖ್ಯೆಯನ್ನು ಇದು ಮೀರಿಸಿದೆ ಎಂದು ಐಸಿಸಿ ಹೇಳಿದೆ.  ‘ವೀಕ್ಷಕರ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ನೋಡಿದರೆ ಟಿ20 ಕ್ರಿಕೆಟ್‌ನ ಶಕ್ತಿ ಮತ್ತು ಜನಪ್ರಿಯತೆಯು ಅರ್ಥವಾಗುತ್ತದೆ‘ ಎಂದು ಐಸಿಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಅಲಾರ್ಡಿಸ್ ತಿಳಿಸಿದ್ದಾರೆ.

SCROLL FOR NEXT