ಕ್ರಿಕೆಟ್

ಶ್ರೀಮಂತ, ಬಲಿಷ್ಠ ಭಾರತಕ್ಕೇ ಆಗಿದ್ದರೆ ಇಂಗ್ಲೆಂಡ್ ಹೀಗೆ ಮಾಡುತ್ತಿರಲಿಲ್ಲ: ಪಾಕ್ ಸರಣಿ ರದ್ದತಿ ಬಗ್ಗೆ ಮೈಕೆಲ್ ಹೋಲ್ಡಿಂಗ್

Srinivas Rao BV

ಲಂಡನ್: ಪಾಕಿಸ್ತಾನದಲ್ಲಿ ನಿಗದಿಯಾಗಿದ್ದ ಇಂಗ್ಲೆಂಡ್ ಕ್ರಿಕೆಟ್ ಟೂರ್ನಮೆಂಟ್ಭದ್ರತಾ ದೃಷ್ಟಿಯಿಂದ ರದ್ದಾಗಿದ್ದು ಈ ಬಗ್ಗೆ ವೆಸ್ಟ್ ಇಂಡೀಸ್ ನ ಲೆಜೆಂಡ್ ಆಟಗಾರ ಮೈಕೆಲ್ ಹೋಲ್ಡಿಂಗ್ಸ್ ಪ್ರತಿಕ್ರಿಯೆ ನೀಡಿದ್ದಾರೆ. 

ಪಾಕಿಸ್ತಾನ-ಇಂಗ್ಲೆಂಡ್ ನಡುವಿನ ಪುರುಷ-ಮಹಿಳೆಯರ ಟೂರ್ನಮೆಂಟ್ ನ್ನು ರದ್ದುಗೊಳಿಸಿರುವ ಇಂಗ್ಲೆಂಡ್ ನಿರ್ಧಾರವನ್ನು ಪಾಶ್ಚಿಮಾತ್ಯದ ಅಹಂಕಾರಕ್ಕೆ ಹಿಡಿದ ಕನ್ನಡಿ ಎಂದಿರುವ ಹೋಲ್ಡಿಂಗ್ಸ್, ಶ್ರೀಮಂತ ಹಾಗೂ ಬಲಿಷ್ಠ ರಾಷ್ಟ್ರ ಭಾರತವೇ ಆಗಿದ್ದರೆ ಅದಕ್ಕೆ ಇಂಗ್ಲೆಂಡ್ ಈ ರೀತಿ ಮಾಡುತ್ತಿರಲಿಲ್ಲ" ಎಂದು ಹೇಳಿದ್ದಾರೆ.

ಬಿಬಿಸಿ ಸ್ಪೋರ್ಟ್ಸ್ ಗೆ ಹೇಳಿಕೆ ನೀಡಿರುವ ಹೋಲ್ಡಿಂಗ್ ಇಸಿಬಿ ಹೇಳಿಕೆಯಲ್ಲಿ ಸತ್ವವಿಲ್ಲ ಎಂದಿದ್ದಾರೆ. ಈ ಸಂಬಂಧ ಯಾರೂ ಮುಂದೆ ಬಂದು ಏನನ್ನೂ ಎದುರಿಸಲು ಸಿದ್ಧರಿಲ್ಲ ಏಕೆಂದರೆ ಅವರು ಮಾಡಿರುವುದು ತಪ್ಪು ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಕೇವಲ ಹೇಳಿಕೆ ನೀಡಿ ತಪ್ಪಿಸಿಕೊಂಡಿದ್ದಾರೆ, ಅವರು Black Lives Matter ವಿಷಯದಲ್ಲಿಯೂ ಹೀಗೆಯೇ ಮಾಡಿದ್ದರು ಎಂದು ಹೇಳಿದ್ದಾರೆ. 

"ನನಗೆ ಹೇಗೆ ಬೇಕೋ, ಹೇಗೆ ಅನ್ನಿಸುತ್ತದೆಯೋ ಹಾಗೆಯೇ ಮತ್ತೊಬ್ಬರನ್ನು ನಡೆಸಿಕೊಳ್ಳುತ್ತೇನೆ" ಇದು ಪಾಶ್ಚಿಮಾತ್ಯ ಅಹಂಕಾರದ ಮನಸ್ಥಿತಿಯಾಗಿದೆ ಎಂದು ಹೋಲ್ಡಿಂಗ್ ಆರೋಪಿಸಿದ್ದಾರೆ. 

2005 ರಿಂದ ಈ ವರೆಗೂ ಇಂಗ್ಲೆಂಡ್ ತಂಡ ಪಾಕಿಸ್ತಾನದಲ್ಲಿ ಆಡಿರಲಿಲ್ಲ. ಈಗ ಟೂರ್ನಮೆಂಟ್ ರದ್ದಾಗದೇ ಇದ್ದಿದ್ದರೆ ಕಳೆದ ಒಂದು ದಶಕಗಳಲ್ಲಿ ಇಂಗ್ಲೆಂಡ್ ಪಾಕ್ ನಲ್ಲಿ ಆಡಲಿದ್ದ ಮೊದಲ ಟೂರ್ನಿ ಇದಾಗಿರುತ್ತಿತ್ತು.

SCROLL FOR NEXT