ಕ್ರಿಕೆಟ್

ಐಪಿಎಲ್ 2021: ಕೋಲ್ಕತ್ತಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಚೆನ್ನೈ ಸೂಪರ್ ಕಿಂಗ್ಸ್!

Vishwanath S

ದುಬೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 27 ರನ್ ಗಳಿಂದ ಮಣಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು ಫಾಫ್ ಡುಪ್ಲೆಸಿಸ್ 86 ರನ್ ಗಳ ಬೆಂಬಲದೊಂದಿಗೆ ತಂಡ ನಿಗದಿತ ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.

ಚೆನ್ನೈ ತಂಡದ ಶಾರ್ದೂಲ್ ಠಾಕೂರ್ 3 ಮತ್ತು ರವೀಂದ್ರ ಜಡೇಜಾ ಮತ್ತು ಜೋಶ್ ಹ್ಯಾಝಲ್‌ವುಡ್‌ನಿಂದ ತಲಾ 2 ವಿಕೆಟ್ ಪಡೆದು ಕೋಲ್ಕತ್ತಾವನ್ನು 165/9ಕ್ಕೆ ಸೀಮಿತಗೊಳಿಸಿದರು. ಇದರೊಂದಿಗೆ ಕೋಲ್ಕತ್ತಾ 27 ರನ್ ಗಳಿಂದ ಚೆನ್ನೈಗೆ ಶರಣಾಯಿತು.

ಇದು ಚೆನ್ನೈ ಸೂಪರ್ ಕಿಂಗ್ಸ್ ನ ನಾಲ್ಕನೇ ಐಪಿಎಲ್ ಪ್ರಶಸ್ತಿಯಾಗಿದೆ. ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ತಂಡ ಐದು ಗೆಲುವಿನೊಂದಿಗೆ ಟ್ರೋಫಿ ಗೆಲ್ಲುವಲ್ಲಿ ಮುಂಚೂಣಿಯಲ್ಲಿದೆ.

2010, 2011, 2018ರಲ್ಲಿ ಟ್ರೋಫಿ ಗೆದ್ದಿದ್ದ ಚೆನ್ನೈ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಬಾರಿ ಪ್ರಶಸ್ತಿ ಗೆದ್ದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

SCROLL FOR NEXT