ಕ್ರಿಕೆಟ್

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಐಸಿಸಿ ಪುರುಷರ ಟಿ 20 ವಿಶ್ವಕಪ್ ಆಯೋಜನೆ

Shilpa D

ದುಬೈ: ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ಐಸಿಸಿ ಪುರುಷರ ಟಿ-20 ವಿಶ್ವಕಪ್ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಿಂದ ತಿಳಿದು ಬಂದಿದೆ. ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿದ್ದು, ದೇಶದ ವಿವಿಧ ಅಂಗಳದಲ್ಲಿ 45 ಪಂದ್ಯಗಳು ನಡೆಯಲಿವೆ.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅತಿದೊಡ್ಡ ಕ್ರೀಡಾಕೂಟ ರಾಷ್ಟ್ರದ ಉತ್ಸಾಹವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಖರವಾಗಿ ಒಂದು ವರ್ಷದ ನಂತರ ಕ್ರಿಕೆಟ್ ಮತ್ತು ಸಂಸ್ಕೃತಿಯ ಆಚರಣೆಗಾಗಿ ಎಲ್ಲಾ ವಯಸ್ಸಿನ ಜನರನ್ನು ಒಟ್ಟುಗೂಡಿಸಲಿದೆ" ಎಂದು ಐಸಿಸಿ ಪುರುಷರ ಟಿ 20 ವಿಶ್ವಕಪ್ ಸ್ಥಳೀಯ ಸಂಘಟನಾ ಸಮಿತಿ ಸಿಇಒ ಮಿಶೆಲ್ ಎನ್ರೈಟ್ ಹೇಳಿದರು.

ಆಸ್ಟ್ರೇಲಿಯಾ ಕ್ರಿಕೆಟ್ ನ ಸುದೀರ್ಘ ಇತಿಹಾಸದಲ್ಲಿ, ಐಸಿಸಿ ಪುರುಷರ ಟಿ 20 ವಿಶ್ವಕಪ್ ಅನ್ನು ಇದೇ ಮೊದಲು ಆಯೋಜಿಸಲಿದೆ. ರಾಷ್ಟ್ರವು 2020 ರಲ್ಲಿ ಮಹಿಳಾ ಪಂದ್ಯಾವಳಿಯನ್ನು ಆಯೋಜಿಸಿತ್ತು. ಅಲ್ಲದೆ ಫೈನಲ್‌ನಲ್ಲಿ 86,174 ಅಭಿಮಾನಿಗಳು ಭಾಗವಹಿಸಿದ್ದರು.

ಒಮೆನ್ ಮತ್ತು ಯುಎಇಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನ ಸೂಪರ್ 12 ಹಂತವನ್ನು ತಲುಪುವ ತಂಡಗಳು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟೂರ್ನಿಗೆ ಅರ್ಹತೆಯನ್ನು ಗಳಿಸುತ್ತವೆ.

SCROLL FOR NEXT