ಕ್ರಿಕೆಟ್

ಐಪಿಎಲ್ 2022: ಅಹಮದಾಬಾದ್, ಲಖನೌ ತಂಡಗಳು ಸೇರ್ಪಡೆ ಸಾಧ್ಯತೆ, ಫ್ರಾಂಚೈಸಿ ಖರೀದಿಗೆ ಜಿದ್ದಾಜಿದ್ದಿ!

Srinivasamurthy VN

ನವದೆಹಲಿ: ಮುಂದಿನ ವರ್ಷದ ಅಂದರೆ ಐಪಿಎಲ್ 2022ರ ಟೂರ್ನಿಗೆ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗುವುದು ಖಚಿತವಾಗಿದ್ದು, ಹೊಸ ತಂಡಗಳ ಹಾದಿಯಲ್ಲಿ ಅಹಮದಾಬಾದ್, ಲಖನೌ ಮುಂಚೂಣಿಯಲ್ಲಿವೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಹೊಸ ಐಪಿಎಲ್‌ ಫ್ರಾಂಚೈಸಿಗಳ ರೇಸ್‌ನಲ್ಲಿ ಗುಜರಾತ್‌ನ ಅಹಮದಾಬಾದ್‌ ಮತ್ತು ಉತ್ತರ ಪ್ರದೇಶದ ಲಖನೌ ನಗರಗಳು ಮುಂಚೂಣಿಯಲ್ಲಿದ್ದು, ಈ ಎರಡು ಫ್ರಾಂಚೈಸಿ ಪಡೆಯಲು ದೇಶದ ಘಟಾನುಘಟಿ ಸಂಸ್ಥೆಗಳು ತೀವ್ರ ಪೈಪೋಟಿ ನಡೆಸುತ್ತಿವೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಅಹಮದಾಬಾದ್‌ ಫ್ರಾಂಚೈಸಿಯನ್ನು ಖರೀದಿಸಲು ಭಾರತದ ಬಹುರಾಷ್ಟ್ರೀಯ ಕಂಪನಿ ಅದಾನಿ ಗ್ರೂಪ್ ಮುಂದಾಗಿದೆ.  ಅಂತೆಯೇ ಬ್ರಿಟನ್‌ ಮೂಲದ ಮ್ಯಾಂಚೆಸ್ಟರ್ ಯುನೈಟೆಡ್‌ ಸಹ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಕಾಗದಗಳನ್ನು ಪಡೆದುಕೊಂಡಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಪಿಎಲ್‌ನ ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯೆ ಅಕ್ಟೋಬರ್ 25 ರಂದು ನಡೆಯುವ ಸಾಧ್ಯತೆ ಇದೆ. ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್ ಸೇರಿದಂತೆ ಟೊರೆಂಟ್, ಸಿಂಗಾಪುರ ಮೂಲದ ಪಿಇ ಸಂಸ್ಥೆ, ನವೀನ್ ಜಿಂದಾಲ್ - ಜಿಂದಾಲ್ ಪವರ್ & ಸ್ಟೀಲ್ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. ಆ ಮೂಲಕ ಮುಂದಿನ ವರ್ಷದಿಂದ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ಸೆಣಸಲಿವೆ.

SCROLL FOR NEXT