ಕ್ರಿಕೆಟ್

ಟಿ-20 ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡದಿಂದ ನಾಲ್ಕನೇ ಬಾರಿ ಕಡಿಮೆ ಸ್ಕೋರ್ 

Nagaraja AB

ದುಬೈ: ಟಿ 20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ನಾಲ್ಕನೇ ಬಾರಿಗೆ ಕಡಿಮೆ ಸ್ಕೋರ್ ದಾಖಲಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು. ಅವರು ಈ  ಹಿಂದೆ 2007ರ ಟಿ -20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 116, 2009 ರ ಟಿ -20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 122  ಹಾಗೂ  2009 ರ ಟಿ - 20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 128 ರನ್ ಗಳಿಸಿತ್ತು.

ಇನ್ನೂ  ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ  20 ಓವರ್ ಗಳಲ್ಲಿ 9 ವಿಕೆಟ್ ಗೆ 118 ರನ್ ಗಳಿಸಿತು. ಆಸೀಸ್ ಬೌಲರ್‌ಗಳ   ದಾಳಿಗೆ  ಮಕ್ರಮ್ (40) ಹೊರತು ಪಡಿಸಿ ಬೇರೆ ಯಾರೂ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ದಕ್ಷಿಣ ಆಫ್ರಿಕಾದ ಐವರು  ಬ್ಯಾಟ್ಸ್‌ಮನ್‌ಗಳು   ಸಿಂಗಲ್‌ ಡಿಜಿಟ್‌ ಗೆ  ಸೀಮಿತಗೊಂಡಿದ್ದರು.  

ಆಸೀಸ್ ಬೌಲರ್‌ಗಳಲ್ಲಿ ಹ್ಯಾಜಲ್‌ವುಡ್, ಆಡಮ್ ಜಂಪಾ, ಮಿಚೆಲ್ ಸ್ಟಾರ್ಕ್ ತಲಾ ಎರಡು ವಿಕೆಟ್ ಪಡೆದರು. ಮ್ಯಾಕ್ಸ್‌ವೆಲ್, ಕಮಿನ್ಸ್ ತಲಾ ನಾಲ್ಕು ವಿಕೆಟ್ ಪಡೆದರು.  ನಂತರ ಬ್ಯಾಟಿಂಗ್‌  ಮಾಡಿದ  ಆಸೀಸ್‌ ತಂಡ ಐದು ವಿಕೆಟ್‌ ಅಂತರದ ರೋಚಕ  ಜಯ ಸಾಧಿಸಿದೆ.

SCROLL FOR NEXT