ಕ್ರಿಕೆಟ್

ಭಾರತವನ್ನು ಸೋಲಿಸಬೇಕೇ..? ಅವರಿಗೆ ನಿದ್ರೆ ಮಾತ್ರೆ ಕೊಡಿ: ಪಾಕಿಸ್ತಾನಕ್ಕೆ ಶೊಯೆಬ್ ಅಖ್ತರ್ ಸಲಹೆ

Srinivasamurthy VN

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಇಂದು ಸಂಜೆ 7.30ಕ್ಕೆ ದುಬೈ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಬರೊಬ್ಬರಿ 2 ವರ್ಷಗಳ ಬಳಿಕ ಕ್ರಿಕೆಟ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಉಭಯ ತಂಡಗಳು ಸೆಣಸಾಡುತ್ತಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಅಜೇಯ ದಾಖಲೆ ಹೊಂದಿದ್ದು, ಈ ವರೆಗೂ ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯದ ಫಲಿತಾಂಶ ರಹಿತವಾಗಿತ್ತು. ಹೀಗಾಗಿ ಈ ಹೈವೋಲ್ಟೇಜ್ ಪಂದ್ಯದ ಕುರಿತು ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.

ಈ ಬಾರಿಯ ವಿಶ್ವಕಪ್‌ನಲ್ಲಿಯಾದರೂ ಭಾರತದ ವಿರುದ್ಧದ ಸೋಲಿನ ಸರಪಳಿಯನ್ನು ಪಾಕಿಸ್ತಾನ ತುಂಡರಿಸುತ್ತದೆಯೇ ಎಂಬುದು ಪಾಕಿಸ್ತಾನದ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಪಾಕ್ ಆಟಗಾರರಿಗೆ ಗೆಲುವಿಗೆ ಸುಲಭ ದಾರಿಯೊಂದನ್ನು ಹೇಳಿದ್ದಾರೆ.

ಭಾರತಕ್ಕೆ ನಿದ್ರೆ ಮಾತ್ರೆ ಕೊಡಿ
'ಸ್ಪೋರ್ಟ್ಸ್ ಕೀಡಾ' ವೆಬ್‌ಸೈಟ್‌ ಜೊತೆಗೆ ಮಾತನಾಡಿದ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ತಮಾಷೆಯಾಗಿ ಪಾಕಿಸ್ತಾನ ತಂಡದ ಗೆಲುವಿಗೆ ಸಲಹೆಯನ್ನು ನೀಡಿದ್ದಾರೆ. ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಸುಲಭವಾಗಿ ಗೆಲ್ಲಬೇಕಿದ್ದರೆ ಭಾರತೀಯ ಆಟಗಾರರಿಗೆ ನಿದ್ದೆ ಮಾತ್ರೆ ಕೊಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ಮೂಲಕ ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವುದು ಅಸಾಧ್ಯ ಎಂಬುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
 

SCROLL FOR NEXT