ಕ್ರಿಕೆಟ್

ವಿಶ್ವದ ಅತಿ ಉದ್ದ ಕ್ರಿಕೆಟ್ ಬ್ಯಾಟ್ ಹೈದರಾಬಾದ್ ನಲ್ಲಿ ಪ್ರದರ್ಶನಕ್ಕೆ: ಇದು ಹೇಗಿದೆ ನೋಡಿ

Sumana Upadhyaya

ಹೈದರಾಬಾದ್: ವಿಶ್ವದ ಅತಿ ಉದ್ದ ಕ್ರಿಕೆಟ್ ಬ್ಯಾಟ್, ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರ ನೀಡಿರುವ ಕ್ರಿಕೆಟ್ ಬ್ಯಾಟ್ ನ್ನು ಹೈದರಾಬಾದ್ ನಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಅದನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅನಾವರಣಗೊಳಿಸಿದರು.

ಪಾನೀಯ ಕಂಪೆನಿ ಪೆರ್ನೊಡ್ ರಿಚರ್ಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ತೆಲಂಗಾಣ ಸರ್ಕಾರಕ್ಕೆ ಈ ಕ್ರಿಕೆಟ್ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದು, 56.1 ಅಡಿ ಉದ್ದ ಮತ್ತು 9 ಸಾವಿರ ಕೆಜಿ ತೂಕ ಹೊಂದಿದೆ. ನವೆಂಬರ್ 15ರವರೆಗೆ ಇದನ್ನು ಟ್ಯಾಂಕ್ ಬಂಡ್ ನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಸಂಡೆ-ಫಂಡೆ ಕಾರ್ಯಕ್ರಮಕ್ಕೆ ಇದು ಅತ್ಯಾಕರ್ಷಣೆಯಾಗಿದೆ. ನಂತರ ಉಪ್ಪಲ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಡಲಾಗುತ್ತದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ ಸಮಯದಲ್ಲಿ ಈ ಕ್ರಿಕೆಟ್ ಬ್ಯಾಟ್ ನ್ನು ಅನಾವರಣಗೊಳಿಸಲಾಗಿದ್ದು ಪೆರ್ನೊಡ್ ರಿಚರ್ಡ್ ಈ ಬ್ಯಾಟ್ ನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಸಮರ್ಪಿಸಿದರು. ಪಾಪ್ಲರ್ ಮರದಿಂದ ಇದನ್ನು ತಯಾರಿಸಲಾಗಿದ್ದು ಇದನ್ನು ತಯಾರಿಸಲು ಸುಮಾರು ಒಂದು ತಿಂಗಳು ಹಿಡಿಯಿತಂತೆ.

SCROLL FOR NEXT