ಕ್ರಿಕೆಟ್

ಟಿ-20 ವಿಶ್ವಕಪ್; ಕೊಹ್ಲಿ ಪ್ರೆಸ್ ಕಾನ್ಫರೆನ್ಸ್; ಪಾಕ್ ಪತ್ರಕರ್ತನ ಬೆವರಿಳಿಸಿದ ವಿರಾಟ್ 

Srinivas Rao BV

ದುಬೈ: ಟಿ20 ವಿಶ್ವಕಪ್ ಸೂಪರ್ 12ರ ಘಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮೊದಲ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಕೊಹ್ಲಿ ನೇತೃತ್ವದ ಭಾರತ ತಂಡ ಹೀನಾಯ ಸೋಲುಂಡಿದೆ. ದುಬೈನ ಮೊದಲ ಪಂದ್ಯದಲ್ಲಿ ಸೋತ ಬಳಿಕ, ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯರು ಸೇರಿದಂತೆ ಪಾಕಿಸ್ತಾನದ ಪತ್ರಕರ್ತರು ಇದ್ದರು. ಈ ವೇಳೆ ಪಾಕ್ ಪತ್ರಕರ್ತ, ಭಾರತದ ಆಟಗಾರರ ಆಯ್ಕೆ ಬಗ್ಗೆ ಅನೇಕರು ಪ್ರಶ್ನೆ ಎತ್ತಿದ್ದಾರೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಸ್ಥಾನದಲ್ಲಿ ಇಶಾನ್ ಕಿಶನ್ 11ರ ತಂಡದಲ್ಲಿ ಸೇರ್ಪಡೆಯಾಗುತ್ತಾರೆಯೇ ಅಂತಾ ಪ್ರಶ್ನೆ ಮಾಡಿದರು.

ನೀವು ಬಹದ್ದೂರ್ ಪ್ರಶ್ನೆಯನ್ನೇ ಕೇಳಿದ್ದೀರಿ. ನಾನು ಅತ್ಯುತ್ತಮ ತಂಡದೊಂದಿಗೆ ಆಡಿದ್ದೇನೆ. ನೀವೇನು ಮಾಡುತ್ತೀರಿ.? ರೋಹಿತ್ ಶರ್ಮಾ ಅವರನ್ನು ಟಿ-20 ತಂಡದಿಂದ ಕೈಬಿಡಬೇಕಾ? ಕಳೆದ ಪಂದ್ಯದಲ್ಲಿ ಅವರು ಏನು ಮಾಡಿದ್ದಾರೆ ನಿಮ್ಗೆ ಗೊತ್ತಾ? ನಿಮಗೆ ಯಾವುದೇ ವಿವಾದ ಬೇಕಾಗಿದ್ದಲ್ಲಿ ನೇರವಾಗಿ ಹೇಳಿ. ನಾನು ಅದೇ ದಾಟಿಯಲ್ಲಿ ನಿಮ್ಗೆ ಉತ್ತರ ಕೊಡುತ್ತೇನೆ ಅಂತಾ ವಿರಾಟ್ ಕೊಹ್ಲಿ ಪಾಕಿಸ್ತಾನ ಪತ್ರಕರ್ತನಿಗೆ ಹೇಳಿದರು. ವಿರಾಟ್ ಕೊಹ್ಲಿಯ ಉತ್ತರ ಕೇಳಿ ಪಾಕಿಸ್ತಾನ ಪತ್ರಕರ್ತರನ ಮೈ ಚಳಿ ಬಿಟ್ಟಿತ್ತು.

SCROLL FOR NEXT