ಕ್ರಿಕೆಟ್

ಟೆಸ್ಟ್ ಪಂದ್ಯಗಳಲ್ಲಿ ಉಮೇಶ್ ಯಾದವ್ ಅಪರೂಪದ ದಾಖಲೆ

Lingaraj Badiger

ಲಂಡನ್: ಟೀಂ ಇಂಡಿಯಾ ವೇಗದ  ಬೌಲರ್ ಉಮೇಶ್ ಯಾದವ್ ಟೆಸ್ಟ್  ಪಂದ್ಯಗಳಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. 31 ರನ್ ಗಳಿಸಿದ ಡೇವಿಡ್ ಮಲಾನ್ ಅವರನ್ನು ಔಟ್‌ ಮಾಡುವ ಮೂಲಕ ಉಮೇಶ್‌ ಈ ದಾಖಲೆ ನಿರ್ಮಿಸಿದ್ದಾರೆ. 

ಉಮೇಶ್ ಯಾದವ್ ಅವರು ಅತ್ಯಂತ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಕ್ಲಬ್ ಸೇರಿದ್ದು, ಟೀಂ ಇಂಡಿಯಾ ಬೌಲರ್‌ ಗಳಲ್ಲಿ  ಜಹೀರ್ ಖಾನ್ ಜೊತೆಗೂಡಿ, ಉಮೇಶ್‌  ಸಂಯುಕ್ತವಾಗಿ ನಾಲ್ಕನೇ ಬೌಲರ್ ಆಗಿದ್ದಾರೆ. ಕಪಿಲ್ ದೇವ್ 39 ಟೆಸ್ಟ್ ಪಂದ್ಯಗಳಲ್ಲಿ 150 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.  ನಂತರ ಜಾಗವಲ್ ಶ್ರೀನಾಥ್ (40 ಟೆಸ್ಟ್),  ಮೊಹಮ್ಮದ್ ಶಮಿ (42 ಟೆಸ್ಟ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಜಹೀರ್ ಖಾನ್ 49 ಟೆಸ್ಟ್ ಪಂದ್ಯಗಳಲ್ಲಿ 150 ವಿಕೆಟ್ ಪಡೆದಿದ್ದಾರೆ.

ಮೊದಲ ಮೂರು ಟೆಸ್ಟ್ ಗಳಲ್ಲಿ ಉಮೇಶ್ ಗೆ ಅವಕಾಶ ನೀಡಿರಲಿಲ್ಲ. ಆದರೆ, ನಾಲ್ಕನೇ ಟೆಸ್ಟ್ ನಲ್ಲಿ ಶಮಿ ಬದಲಿಗೆ ತಂಡಕ್ಕೆ ಬಂದ ಉಮೇಶ್ ಉತ್ತಮ ಬೌಲಿಂಗ್ ಮಾಡಿದರು. ಈಗಾಗಲೇ ನಾಲ್ಕನೇ ಟೆಸ್ಟ್‌ನಲ್ಲಿ ಮಲಾನ್, ಜೋ ರೂಟ್, ಕ್ರೇಗ್ ಓವರ್ಟನ್ ಅವರನ್ನು ಪೆವಿಲಿಯನ್‌ ಗೆ  ಕಳುಹಿಸಿದ್ದಾರೆ. 

ಇನ್ನೂ ಬೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ಗೆ 139 ರನ್ ಗಳಿಸಿತು. ಓಲಿ ಪೋಪ್ 38, ಬೆಯರ್‌ ಸ್ಟೊ 34    ಆಡುತ್ತಿದ್ದಾರೆ. ಇಂಗ್ಲೆಂಡ್‌, ಟೀಮ್ ಇಂಡಿಯಾಕ್ಕಿಂತ ಇನ್ನೂ 52 ರನ್ ಗಳ ಹಿಂದಿದೆ.

SCROLL FOR NEXT