ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ 
ಕ್ರಿಕೆಟ್

ಭಾರತ- ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಐಸಿಸಿ ನಿಯಮ ಉಲ್ಲಂಘನೆಗಾಗಿ ರಾಹುಲ್ ಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡ

ಒವಲ್ ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಐಸಿಸಿ ನಿಯಮ ಲೆವೆಲ್ ಒನ್ ಉಲ್ಲಂಘನೆಗಾಗಿ ಭಾರತದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡವನ್ನು ವಿಧಿಸಲಾಗಿದೆ.

ಲಂಡನ್: ಒವಲ್ ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಐಸಿಸಿ ನಿಯಮ ಲೆವೆಲ್ ಒನ್ ಉಲ್ಲಂಘನೆಗಾಗಿ ಭಾರತದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡವನ್ನು ವಿಧಿಸಲಾಗಿದೆ.

ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಐಸಿಸಿ, ರಾಹುಲ್ ಐಸಿಸಿ ನಿಯಮದ ಆರ್ಟಿಕಲ್  2.8 ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ.  ಹೀಗಾಗಿ ಪಂದ್ಯದ ಶೇ. 15 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ  ರಾಹುಲ್ ಶಿಸ್ತಿನ ದಾಖಲೆಯಲ್ಲಿ ಒಂದು ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆಯಾಗಿದೆ ಎಂದು ತಿಳಿಸಿದೆ.  24 ತಿಂಗಳ ಅವಧಿಯಲ್ಲಿ ಇದು ರಾಹುಲ್ ಅವರ ಮೊದಲ ಅಪರಾಧವಾಗಿದೆ. 

ಭಾರತದ ದ್ವಿತೀಯ ಇನ್ನಿಂಗ್ಸ್ ವೇಳೆಯಲ್ಲಿ  ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ ನಲ್ಲಿ ಕೆ .ಎಲ್. ರಾಹುಲ್ 46 ರನ್ ಗಳಿಸಿದಾಗ ಔಟ್ ಆಗಿದ್ದರು. ಇಂಗ್ಲೆಂಡ್ ಆಟಗಾರರ ಮನವಿಯನ್ನು ಫೀಲ್ಡ್ ಅಂಪೈರ್ ಪುರಸ್ಕರಿಸಲಿಲ್ಲ. ಆದರೆ, ಇಂಗ್ಲೆಂಡ್ ಆಟಗಾರರು ಡಿಆರ್ ಎಸ್ ರಿವ್ಯೂ ಮೊರೆ ಹೋದಾಗ, ಥರ್ಡ್ ಅಂಪೈರ್ ಔಟ್ ತೀರ್ಪು ನೀಡಿದ್ದರು. ಅಂಪೈರ್ ತೀರ್ಪಿನ ವಿರುದ್ಧ ರಾಹುಲ್ ಅಸಮಾಧಾನಗೊಂಡಿದ್ದರು.

ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ನಿರ್ಣಯಕ್ಕೆ ಅಸಮ್ಮತಿ ಸೂಚಿಸುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಗಳಿಗೆ ವಿರುದ್ಧವಾದದ್ದು ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ದಂಡ ಪಾವತಿಸಲು ರಾಹುಲ್ ಒಪ್ಪಿಕೊಂಡಿರುವ ಕಾರಣ ಈ ಕುರಿತು ಅಧಿಕೃತ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ

ಸಿಂಹ ಅಲ್ಲ 'ನಾಯಿ' ಎಂದು ಹೆಸರಿಡಬೇಕಿತ್ತು: ಕಚ್ಚೆ ಹರುಕನಿಗೆ ಟಿಕೆಟ್ ಕೊಡದೆ ಬಿಜೆಪಿಯವರೇ ಕ್ಯಾಕರಿಸಿ ಉಗಿದು ಮನೆಯಲ್ಲಿ ಕೂರಿಸಿದ್ದಾರೆ!

ಮರು ಎಣಿಕೆಯಲ್ಲಿ ಮಂಜುನಾಥ್ ಗೆದ್ದರೆ ರಾಜಕೀಯ ನಿವೃತ್ತಿ: ಮಾಲೂರು ಶಾಸಕ ನಂಜೇಗೌಡ

ಜಾತಿಗಣತಿ ಸಮೀಕ್ಷೆ 2025: ಆಶಾ ಕಾರ್ಯಕರ್ತರಿಗೆ 2,000 ರೂ. ಗೌರವ ಧನ ಘೋಷಿಸಿದ ಸರ್ಕಾರ

SCROLL FOR NEXT