ಕ್ರಿಕೆಟ್

ಯುಕೆಯಲ್ಲಿರುವ ಎಲ್ಲಾ ಭಾರತೀಯ ಆಟಗಾರರಿಗೆ ಕೊರೋನಾ ನೆಗೆಟಿವ್, 5ನೇ ಟೆಸ್ಟ್ ಮುಂದುವರಿಯುವ ಸಾಧ್ಯತೆ

Lingaraj Badiger

ಮ್ಯಾಂಚೆಸ್ಟರ್: ಭಾರತೀಯ ಟೆಸ್ಟ್ ತಂಡದ ಎಲ್ಲ 21 ಆಟಗಾರರು ಕೋವಿಡ್ -19 ಪರೀಕ್ಷೆಗೆ ಒಳಗಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ ಶುಕ್ರವಾರದಿಂದ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುವ ಸಾಧ್ಯತೆ ಇದೆ.

ಟೀಂ ಇಂಡಿಯಾದ ಸಹಾಯಕ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೆ ಗುರುವಾರ ಕೋವಿಡ್ ಪಾಸಿಟಿವ್ ದೃಢಪಟ್ಟ ನಂತರ ಇಡೀ ಭಾರತೀಯ ತಂಡ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಯಿತು.

"ಎಲ್ಲಾ ಆಟಗಾರರು ನೆಗೆಟಿವ್ ಪರೀಕ್ಷೆಯೊಂದಿಗೆ ಮರಳಿದ್ದಾರೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ಶುಕ್ರವಾರ ಪಿಟಿಐಗೆ ತಿಳಿಸಿವೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವು ಸೆಪ್ಟೆಂಬರ್ 10 ರಿಂದ ನಡೆಯಲಿದೆ. ಆದರೆ ಯೋಗೀಶ್ ಪರ್ಮಾರ್ ಅವರಿಗೆ ಕೊರೋನಾ ದೃಢ ಪಟ್ಟ ನಂತರ ಈ ಪಂದ್ಯದ ಮೇಲೆ ಅಪಾಯದ ಕಾರ್ಮೋಡಗಳು ಸುಳಿದಾಡುತ್ತಿವೆ.

ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮತ್ತು ಫಿಸಿಯೋ ನಿತಿನ್ ಪಟೇಲ್ ಈಗಾಗಲೇ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದಾರೆ. ಈಗ ಮತ್ತೊಬ್ಬ ಸಹಾಯಕ ಸಿಬ್ಬಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.

SCROLL FOR NEXT