ರಶೀದ್ ಖಾನ್-ಮೊಹಮ್ಮದ್ ನಬಿ 
ಕ್ರಿಕೆಟ್

ರಶೀದ್ ಖಾನ್ ರಾಜಿನಾಮೆ: ಅಫ್ಘಾನ್ ಟಿ20 ತಂಡಕ್ಕೆ ಮೊಹಮ್ಮದ್‌ ನಬಿ ನಾಯಕನಾಗಿ ಆಯ್ಕೆ

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಟಿ 20 ನಾಯಕರಾಗಿ ಆಲ್ ರೌಂಡರ್ ಮೊಹಮ್ಮದ್ ನಬಿ ಅವರು ಆಯ್ಕೆಗೊಂಡಿದ್ದಾರೆ.  

ಕಾಬೂಲ್‌: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಟಿ 20 ನಾಯಕರಾಗಿ ಆಲ್ ರೌಂಡರ್ ಮೊಹಮ್ಮದ್ ನಬಿ ಅವರು ಆಯ್ಕೆಗೊಂಡಿದ್ದಾರೆ.  

ಮೊಹಮ್ಮದ್ ನಬಿ ಟ್ವಿಟರ್ ಮೂಲಕ ಈ ವಿಷಯ ತಿಳಿಸಿದ್ದಾರೆ. ಈ ನಿರ್ಣಾಯಕ ಸಮಯದಲ್ಲಿ ಟಿ20 ಮಾದರಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಬೇಕೆಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಗೌರವಿಸುತ್ತೇನೆ. ಅಲ್ಲಾಹನ ಕೃಪೆಯಿಂದ ಟಿ20 ವಿಶ್ವಕಪ್ ನಲ್ಲಿ ದೇಶ ಹೆಮ್ಮೆ ಪಡುವ ರೀತಿ ಪ್ರದರ್ಶನ ನೀಡಲಿದ್ದೇವೆ ಎಂದು ನಬಿ ಟ್ವೀಟ್ ಮಾಡಿದ್ದಾರೆ.  

ಟಿ 20 ವಿಶ್ವಕಪ್‌ಗಾಗಿ ಆಫ್ಘಾನಿಸ್ತಾನ ತಂಡ ಪ್ರಕಟಿಸಿದ ನಂತರ ರಶೀದ್ ಖಾನ್ ಅಫ್ಘಾನಿಸ್ತಾನ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ನಾಯಕನಾದ ನನ್ನನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಪರಿಗಣಿಸಬೇಕಿತ್ತು, ಆದರೆ ನನಗೆ ಯಾವುದೇ ಮಾಹಿತಿಯನ್ನು ನೀಡದೇ ಇಡೀ ತಂಡವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಆಯ್ಕೆ ಮಾಡಿ  ಘೋಷಣೆ ಮಾಡಿದ್ದು ಮನಸ್ಸಿಗೆ ಬೇಸರ ತಂದಿದೆ. ಹೀಗಾಗಿ ನಾನು ಅಫ್ಘಾನಿಸ್ತಾನ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ತಕ್ಷಣವೇ ಕೆಳಗಿಳಿಯುತ್ತಿದ್ದೇನೆ ಎಂದು ರಶೀದ್ ಖಾನ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಯೋತ್ಪಾದನೆ ಕೊನೆಗೊಳಿಸಿ ನಂತರ ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆ: ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

ರಾಮಮಂದಿರಕ್ಕೆ ನಾನು ಕೊಟ್ಟ 1.11 ಲಕ್ಷ ದೇಣಿಗೆ ಹಣ ವಾಪಸ್‌ ಕೊಡಿ, ಇಲ್ಲ ಕೋರ್ಟಿಗೆ ಹೋಗ್ತೀನಿ: ದಿಗ್ವಿಜಯ್ ಸಿಂಗ್

ಭಾರತದಲ್ಲಿ ಇದ್ದಿದ್ದರೆ ಈ ಕೊಳಕು ವ್ಯವಸ್ಥೆಯಲ್ಲಿ ಎಂದಿಗೂ ನಾನು CEO ಆಗುತ್ತಿರಲಿಲ್ಲ: ಇಂದ್ರಾ ನೂಯಿ

ಅಸ್ವಸ್ಥ ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು 6 ಕಿ.ಮೀ ನಡೆದು, ಆಸ್ಪತ್ರೆಗೆ ಸೇರಿಸಿದ ಶಿಕ್ಷಕಿ! Video

ಟೂರಿಸ್ಟ್ ವೀಸಾ ಪುನರಾರಂಭ: ತೀವ್ರ ಬೇಡಿಕೆ, ಬಾಂಗ್ಲಾದೇಶದಲ್ಲಿ ಮತ್ತಷ್ಟು ವೀಸಾ ಸೇವೆ ಹೆಚ್ಚಿಸಲು ಭಾರತ ಮುಂದು!