ಕ್ರಿಕೆಟ್

ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯ ರದ್ದು: ಪರಿಹಾರ ನೀಡುವಂತೆ ಇಂಗ್ಲೆಂಡ್ ಐಸಿಸಿಗೆ ಮೊರೆ- ವಕ್ತಾರರು

Nagaraja AB

ಲಂಡನ್: ಭಾರತ- ಇಂಗ್ಲೆಂಡ್ ತಂಡಗಳ ನಡುವೆ ಸೆಪ್ಟೆಂಬರ್ 10 ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊರೆ ಹೋಗಿದೆ. ಸಂದಿಗ್ಧತೆಗೆ ಸಿಲುಕಿರುವ ಈ ವಿಷಯದಲ್ಲಿ ಯಾವುದಾದರೂ ಪರಿಹಾರ ನೀಡುವಂತೆ ಐಸಿಸಿಯನ್ನು ಕೋರಿದೆ.

5ನೇ ಪಂದ್ಯದೊಂದಿಗೆ  ಸರಣಿ ಫಲಿತಾಂಶದ ಬಗ್ಗೆ ಎರಡೂ ಮಂಡಳಿಗಳಲ್ಲಿ ಒಮ್ಮತ  ಸಾಧ್ಯವಾಗದ ಕಾರಣ  ಐಸಿಸಿ ವಿವಾದ ಪರಿಹಾರ ಸಮಿತಿಗೆ (ಡಿಆರ್‌ಸಿ) ಪತ್ರ ಬರೆಯಲಾಗಿದೆ ಎಂದು ಇಸಿಬಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.  

ಕೋವಿಡ್ -19 ಪ್ರಕರಣದಿಂದಾಗಿ  ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು  ಪ್ರಕಟಿಸಿದರೆ ತಮಗೆ  40 ಮಿಲಿಯನ್ ಪೌಂಡ್‌ ನಷ್ಟವಾಗಲಿದೆ. ಇಂತಹ  ಸಂದರ್ಭಗಳಲ್ಲಿ ಸರಿಯಾದ  ಪರಿಹಾರ ಕಂಡುಕೊಂಡರೆ ವಿಮಾ ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ ಎಂದು ಇಂಗ್ಲೀಷ್‌  ಮಂಡಳಿ  ಹೇಳಿದೆ.

ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಐಸಿಸಿ ಮುಂದೆ ಎರಡು ಪರ್ಯಾಯಗಳಿವೆ. ಒಂದು ವೇಳೆ ಐದನೇ ಟೆಸ್ಟ್ ರದ್ದಾದರೆ (ಮರು ವೇಳಾಪಟ್ಟಿ ನಿಗದಿಪಡಿಸದೆ), ಭಾರತ ಸರಣಿಯನ್ನು 2-1ರಿಂದ ಗೆಲ್ಲುತ್ತದೆ. ಆಗ ಇದನ್ನು ನಾಲ್ಕು ಟೆಸ್ಟ್‌ಗಳ ಸರಣಿ ಎಂದು ಪರಿಗಣಿಸಬೇಕು. ಆದರೆ, ಈ ಪ್ರಸ್ತಾಪವನ್ನು ಇಸಿಬಿ ಒಪ್ಪುಕೊಳ್ಳದಿರಬಹುದು. 

ಎರಡನೆಯದಾಗಿ, ಟೀಮ್ ಇಂಡಿಯಾವೇ ಈ ಪಂದ್ಯವನ್ನು ಆಡಲು ಹಿಂಜರಿದರೆ  ಇಂಗ್ಲೆಂಡ್ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್ ತಂಡ ಪಂದ್ಯ ಆಡಲು ಸಿದ್ಧವಾಗಿದ್ದರೂ ಕೊರೊನಾ ಕಾರಣ ಭಾರತ ಒಪ್ಪದಿದ್ದಾಗ ಇಂಗ್ಲೆಂಡ್ ಪರವಾಗಿ ಫಲಿತಾಂಶ ಘೋಷಿಸುವ ಅವಕಾಶವೂ  ಇದೆ. ಇದು ಸಂಭವಿಸಿದಲ್ಲಿ, ಸರಣಿ  2-2ರಲ್ಲಿ ಸಮನಾಗಿರುತ್ತದೆ.  ಆಗ ಇಸಿಬಿ  ವಿಮೆಯನ್ನು ಪಡೆಯಬಹುದು.

SCROLL FOR NEXT