ಬ್ರೆಂಡನ್ ಟೇಲರ್ 
ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಜಿಂಬಾಬ್ವೆ ತಂಡದ ಬ್ರೆಂಡನ್ ಟೇಲರ್ ನಿವೃತ್ತಿ ಘೋಷಣೆ

ಜಿಂಬಾಬ್ವೆಯ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಹರಾರೆ: ಜಿಂಬಾಬ್ವೆಯ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಟೇಲರ್ ಭಾನುವಾರ ಟ್ವೀಟ್ ನಲ್ಲಿ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಐರ್ಲೆಂಡ್ ವಿರುದ್ಧ ಬೆಲ್ ಫಾಸ್ಟ್ ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ನಂತರ ನಾನು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತನಾಗುತ್ತೇನೆ.

ನಾಳೆ ನನ್ನ ಪ್ರೀತಿಯ ದೇಶಕ್ಕೆ ನನ್ನ ಕೊನೆಯ ಪಂದ್ಯ ಎಂದು ಘೋಷಿಸಲು ನನ್ನ ಹೃದಯ ಭಾರವಾಗಿದೆ. 17 ವರ್ಷಗಳ ವೃತ್ತಿಜೀವನದಲ್ಲಿ ಹಲವು ಏರಿಳಿತಗಳಿವೆ. ಇದು ನನಗೆ ವಿನಮ್ರವಾಗಿರಲು ಕಲಿಸಿದೆ ಎಂದಿದ್ದಾರೆ.

2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಟೇಲರ್, ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ 34 ಟೆಸ್ಟ್, 204 ಏಕದಿನ ಮತ್ತು 45 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ: ಮೊದಲ ಹಂತದ ಮತದಾನ ಆರಂಭ; 18 ಜಿಲ್ಲೆಗಳ 121 ಸ್ಥಾನಗಳಿಗೆ ವೋಟಿಂಗ್ ; NDA- INDIA ಮೈತ್ರಿಕೂಟಗಳಿಗೆ ಅಗ್ನಿ ಪರೀಕ್ಷೆ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ 'ದೆಹಲಿಗೆ' ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್! ವರಿಷ್ಠರನ್ನು ಭೇಟಿಯಾಗ್ತಾರಾ?

ಇಂದು 8ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ: ಸರ್ಕಾರಕ್ಕೆ ಡೆಡ್ ಲೈನ್, ಸಚಿವ ಪಾಟೀಲ್ ಸಂಧಾನ ಸಭೆ ವಿಫಲ

ನವದೆಹಲಿ: 'ವಿಶ್ವಕಪ್ ವಿಜೇತ' ಆಟಗಾರ್ತಿಯರ ಜೊತೆಗೆ ಪ್ರಧಾನಿ ಮೋದಿ ಸಂವಾದ! ದೀಪ್ತಿ ಶರ್ಮಾರ 'ವಿಶೇಷ ಶಕ್ತಿ'ಯ ಗುಣಗಾನ

ನಡು ಮುರಿದರೂ ಬುದ್ಧಿ ಕಲಿಯದ ಪಾಪಿಸ್ತಾನ; Op Sindoor ನಡೆದ ಆರೇ ತಿಂಗಳಲ್ಲಿ ಕಾಶ್ಮೀರದಲ್ಲಿ ಮತ್ತೊಂದು ದಾಳಿಗೆ ಸ್ಕೆಚ್; ಲಷ್ಕರ್, ಜೈಶ್ ಹೊಸ ಪ್ಲಾನ್ ಬಹಿರಂಗ!

SCROLL FOR NEXT