ಕ್ರಿಕೆಟ್

ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಶ್ರೀಲಂಕಾ ಲೆಜೆಂಡ್ ಆಟಗಾರ ಲಸಿತ್ ಮಲಿಂಗ ನಿವೃತ್ತಿ ಘೋಷಣೆ

Srinivas Rao BV

ಕೊಲಂಬೊ: ಶ್ರೀಲಂಕಾದ 2014 ರ ಟಿ20 ವಿಶ್ವಕಪ್ ವಿಜೇತ ನಾಯಕ ಲಸಿತ್ ಮಲಿಂಗ ಕ್ರಿಕೆಟ್ ನ ಎಲ್ಲಾ ಆವೃತ್ತಿಗೂ ನಿವೃತ್ತಿ ಘೋಷಿಸಿದ್ದಾರೆ.

"ಇಂದು ನನಗೆ ವಿಶೇಷ ದಿನ. ಟಿ20 ವೃತ್ತಿ ಜೀವನದಲ್ಲಿ ನನ್ನನ್ನು ಬೆಂಬಲಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಮ್ಮ ಅಧಿಕೃತ ಯೂಟ್ಯೂಬ್ ಚಾನಲ್ ನಲ್ಲಿ ಮಲಿಂಗ ಹೇಳಿದ್ದಾರೆ.

ತಂಡದ ಸದಸ್ಯರು ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ ಎಲ್ ಸಿ)ಯ ಅಧಿಕಾರಿಗಳು, ಮುಂಬೈ ಇಂಡಿಯನ್ಸ್, ಮೆಲ್ಬೋರ್ನ್ ಸ್ಟಾರ್ಸ್, ಕೆಂಟ್ ಕ್ರಿಕೆಟ್, ರಂಗ್ ಪುರ್ ರೈಡರ್ಸ್, ಗುಯಾನ ಅಮೇಜಾನ್ ವಾರಿಯರ್ಸ್, ಮರಾಠ ಅರಬಿಯನ್ಸ್, ಮೋಂಟ್ರೀಲ್ ಟೈಗರ್ಸ್ ಗಳ ಸದಸ್ಯರಿಗೂ ಮಲಿಂಗ ಧನ್ಯವಾದ ತಿಳಿಸಿದ್ದಾರೆ.

"ನಿಮ್ಮೊಂದಿಗೆ ಆಡುತ್ತಾ, ನಾನು ಕ್ರಿಕೆಟ್ ನಲ್ಲಿ ಅನುಭವ ಹೆಚ್ಚಿಸಿಕೊಂಡಿದ್ದೇನೆ. ಭವಿಷ್ಯದಲ್ಲಿ ಅವುಗಳನ್ನು ನಾನು ಯುವ ಕ್ರಿಕೆಟಿಗರೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ಮಲಿಂಗ ಹೇಳಿದ್ದಾರೆ.

ಜನವರಿ ತಿಂಗಳಲ್ಲಿ ಮಲಿಂಗ ಫ್ರಾಂಚೈಸಿ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು. 2004 ರಲ್ಲಿ ಮಲಿಂಗ ಆಸ್ಟ್ರೇಲಿಯಾದ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಇದಾದ 16 ದಿನಗಳ ಬಳಿಕ ಮೊದಲ ಒಡಿಐ ಪಂದ್ಯವನ್ನಾಡಿದ್ದರು ಮಲಿಂಗ

ಮಲಿಂಗಾ ತಮ್ಮ ಯಾರ್ಕರ್ ಗಳಿಂದಲೇ ಖ್ಯಾತಿ ಪಡೆದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ. 2006 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ ಮಲಿಂಗ, ಟಿ20ಯಲ್ಲಿ 107 ವಿಕೆಟ್ ಗಳನ್ನು ಗಳಿಸಿದ್ದಾರೆ.

SCROLL FOR NEXT