ನರೇಂದ್ರ ಮೋದಿ ಕ್ರೀಡಾಂಗಣ 
ಕ್ರಿಕೆಟ್

History-TV18ರ ಹೊಸ ಸಾಕ್ಷ್ಯಚಿತ್ರ: ಜಗತ್ತಿನ ಅತಿದೊಡ್ಡ ಕ್ರಿಕೆಟ್ ಮೈದಾನ ನರೇಂದ್ರ ಮೋದಿ ಕ್ರೀಡಾಂಗಣದ ರೋಚಕ ಕಥೆ!

ಹಿಸ್ಟರಿ-ಟಿವಿ18 ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಮೈದಾನ ನರೇಂದ್ರ ಮೋದಿ ಕ್ರೀಡಾಂಗಣದ ಸಾಕ್ಷ್ಯಚಿತ್ರ ತಯಾರಿಸಿದ್ದು, ಕ್ರೀಡಾಂಗಣದ ನಿರ್ಮಾಣದ ಹಿಂದಿನ ರೋಚಕ ಕಥೆಯನ್ನು ಈ ಸಾಕ್ಷ್ಯಚಿತ್ರದ ಮೂಲಕ ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದೆ. 

ಅಹ್ಮದಾಬಾದ್: ಹಿಸ್ಟರಿ-ಟಿವಿ18 ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಮೈದಾನ ನರೇಂದ್ರ ಮೋದಿ ಕ್ರೀಡಾಂಗಣದ ಸಾಕ್ಷ್ಯಚಿತ್ರ ತಯಾರಿಸಿದ್ದು, ಕ್ರೀಡಾಂಗಣದ ನಿರ್ಮಾಣದ ಹಿಂದಿನ ರೋಚಕ ಕಥೆಯನ್ನು ಈ ಸಾಕ್ಷ್ಯಚಿತ್ರದ ಮೂಲಕ ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದೆ. 

ಈ ಹೊಚ್ಚಹೊಸ ಸಾಕ್ಷ್ಯಚಿತ್ರ, 'ಸೆಪ್ಟೆಂಬರ್ 17 ರಂದು ಅಂದರೆ ಇಂದು ರಾತ್ರಿ 9 ಗಂಟೆಗೆ  ‘Modern Marvel: World’s Largest Cricket Stadium’ ಎಂಬ ಹೆಸರಿನಲ್ಲಿ ಪ್ರದರ್ಶನಗೊಳ್ಳಲಿದ್ದು, ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮಹತ್ವಾಕಾಂಕ್ಷೆಯ ಹೊಸ ನರೇಂದ್ರ ಮೋದಿ ಕ್ರೀಡಾಂಗಣವನ್ನು ನಿರ್ಮಿಸಿದ್ದರ ವಿವರಣಾತ್ಮಕ ಕಥೆಯನ್ನು ಹೇಳಲಿದೆ. 

ಈ ವರ್ಷದ ಆರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಉದ್ಘಾಟಿಸಿದ ಈ ಹೊಚ್ಚ ಹೊಸ  ಕ್ರೀಡಾಂಗಣವು 1,32,000ರ ಆಸನ ಸಾಮರ್ಥ್ಯವನ್ನು ಹೊಂದಿದ್ದು, ಈ ಮೂಲಕ ಇದು ಆಸ್ಟ್ರೇಲಿಯಾದ ಎಂಸಿಜಿಯನ್ನು ಮೀರಿಸುವ ಮೂಲಕ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದನ್ನು ಇತ್ತೀಚೆಗೆ ಹಳೆಯ ಮೊಟೆರಾ ಕ್ರೀಡಾಂಗಣದ ಅದೇ ಮೈದಾನದಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಿಸಲಾಯಿತು.  ಈಗ, HistoryTV18 ಈ ಬೃಹತ್ ಎಂಜಿನಿಯರಿಂಗ್ ಸಾಧನೆಯ ಬಗ್ಗೆ ವಿವರವಾದ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.  ಇದು ಆಧುನಿಕ ದಿನದ ಆಟಕ್ಕಾಗಿ ನಿರ್ಮಿಸಲಾದ ಭವಿಷ್ಯಮುಖಿ ಕ್ರೀಡಾಂಗಣದ ಕಥೆಯನ್ನು ಹೇಳುತ್ತದೆ. 

ಹೈ-ಡೆಫಿನಿಶನ್ ನಲ್ಲಿ ಚಿತ್ರೀಕರಿಸಲಾದ ಈ ಸಾಕ್ಷ್ಯಚಿತ್ರವು ವೀಕ್ಷಕರನ್ನು ಆಕರ್ಷಿಸುವ ಬೆಚ್ಚಿ ಬೀಳಿಸುವ ಸಂಗತಿಗಳನ್ನು ಪ್ರಸ್ತುತಪಡಿಸುವ ಜೊತೆಗೆ ಈ ವಾಸ್ತುಶಿಲ್ಪದ ಅದ್ಭುತವನ್ನು ರಚಿಸಲು ಬೇಕಾಗುವ  ಸಾಮಾನ್ಯ ಸರಂಜಾಮುಗಳ ಬಗೆಗಿನ ಹಿಂದೆಂದೂ ಕಂಡಿರದ ಅಂಶಗಳನ್ನು ಬಹಿರಂಗಪಡಿಸುತ್ತದೆ. ಈ ಚಿತ್ರದಲ್ಲಿ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ರವಿಶಾಸ್ತ್ರಿಯಂಥ ಕ್ರಿಕೆಟ್ ದಿಗ್ಗಜರು ಮತ್ತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ಕ್ರಿಕೆಟ್ ಪ್ರತಿಭೆಗಳೂ ಕಾಣಿಸಿಕೊಂಡಿದ್ದಾರೆ. ವೀಕ್ಷಕರು ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಪಾರ್ಥಿವ್ ಪಟೇಲ್ ಮತ್ತು ಈ ಯೋಜನೆಯನ್ನು ಪ್ರಾರಂಭದಿಂದ ಅಂತ್ಯದವರೆಗೆ ಮೇಲ್ವಿಚಾರಣೆ ಮಾಡಿದ ವ್ಯಕ್ತಿಯಾದ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಮಾತುಗಳನ್ನು ಕೂಡ ಕೇಳಲಿದ್ದಾರೆ.

 ‘Modern Marvel: World’s Largest Cricket Stadium’, ಕ್ರಿಕೆಟ್ ವಿಶ್ವದ ಕೇವಲ ಹೊಸ ಹೆಗ್ಗುರುತನ್ನು ಕುರಿತು ಆಶ್ಚರ್ಯಕರ ಸಂಗತಿಗಳು ಮತ್ತು ಅಂಕಿಅಂಶಗಳೊಂದಿಗೆ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವುದಷ್ಟೇ ಮಾಡುವುದಿಲ್ಲ ಇದು ಭಾರತದ ಕ್ರಿಕೆಟ್ ಸೂಪರ್ ಸ್ಟಾರ್‌ಗಳು ಹಳೆಯ ಮೊಟೆರಾ  ಪಿಚ್ ಸಾಕ್ಷಿಯಾದ ಭಾರತೀಯ ಕ್ರಿಕೆಟ್‌ನ ಐತಿಹಾಸಿಕ ಕ್ಷಣಗಳನ್ನು ನೆನಪಿಸಿಕೊಳ್ಳುವುದನ್ನು ಕೂಡ ಒಳಗೊಂಡಿದೆ. ರವಿಶಾಸ್ತ್ರಿ "1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುವ" ಬಗ್ಗೆ ಮಾತನಾಡುವುದನ್ನು ಕೂಡ ವೀಕ್ಷಕರು ಈ ಸಾಕ್ಷ್ಯಚಿತ್ರದಲ್ಲಿ ನೋಡಲಿದ್ದಾರೆ.  ಹರಿಯಾಣ ಚಂಡಮಾರುತ' ಕಪಿಲ್ ದೇವ್ ಅವರು ಹಳೆಯ ಮೊಟೆರಾ ಕ್ರೀಡಾಂಗಣದಲ್ಲಿ ಸುನಿಲ್ ಗವಾಸ್ಕರ್ 10,000 ರನ್ ಪೂರ್ಣಗೊಳಿಸಿದ್ದರ ಬಗ್ಗೆ ಮಾತನಾಡುತ್ತಾರೆ. 

"ಇದು ನಾವು ಸಂಭ್ರಮಾಚರಿಸಲು ಒಂದು ದೊಡ್ಡ ವಿಷಯವಾಗಿತ್ತು... ನಮ್ಮ ಪೀಳಿಗೆಯ ಒಬ್ಬ ಕ್ರಿಕೆಟಿಗ 10,000 ರನ್ ಗಳಿಸಿದ್ದರು, ಆದ್ದರಿಂದ ಅದು ತುಂಬಾ ದೊಡ್ಡದಾಗಿತ್ತು!" ಎಂದು ಅವರು ಹೇಳುತ್ತಾರೆ. ಮತ್ತು ಗೌತಮ್ ಗಂಭೀರ್ ಅವರು 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಠಿಣವಾದ ವಿಶ್ವಕಪ್ ಕ್ವಾರ್ಟರ್ ಫೈನಲ್ ಆಡಿದ್ದನ್ನು ನೆನಪಿಸಿಕೊಂಡರೆ, ಮೋಟೆರಾದಲ್ಲಿ ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯನ್ನು ಮುರಿದಿದ್ದನ್ನು ಪಾರ್ಥಿವ್ ಪಟೇಲ್ ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಗರಿಯಿಟ್ಟಂತೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವೀಕ್ಷಕರಿಗೆ ಭಾರತ ರತ್ನ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದ್ದು ಸಹ ಇಲ್ಲಿಯೇ ಎಂದು ನೆನಪಿಸುತ್ತಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT