ಜಸ್ ಪ್ರೀತ್ ಬುಮ್ರಾ 
ಕ್ರಿಕೆಟ್

ಟೀಂ ಇಂಡಿಯಾಗೆ ಹಿನ್ನಡೆ: ಗಾಯದ ಸಮಸ್ಯೆ ಕಾರಣ ಏಷ್ಯಾ ಕಪ್‌ನಿಂದ ಹೊರಗುಳಿದ ಜಸ್ ಪ್ರೀತ್ ಬುಮ್ರಾ!

ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾ ಕಪ್ ಟಿ20 ಟೂರ್ನಿಯಿಂದ ಹೊರಗುಳಿದಿದ್ದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಸಂಕಷ್ಟ ಎದುರಾಗಿದೆ.

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾ ಕಪ್ ಟಿ20 ಟೂರ್ನಿಯಿಂದ ಹೊರಗುಳಿದಿದ್ದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಸಂಕಷ್ಟ ಎದುರಾಗಿದೆ.

ಬುಮ್ರಾ ಬೆನ್ನುನೋವು ಸಮಸ್ಯೆಯಿಂದ ಬಳಲುತ್ತಿದ್ದು ಅವರು ಗುಣವಾಗಲು ಮತ್ತಷ್ಟು ಸಮಯ ಬೇಕಾಗುತ್ತದೆ. ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ಗಾಗಿ ಟೀಂ ಇಂಡಿಯಾವನ್ನು ಸೋಮವಾರ ಆಯ್ಕೆ ಮಾಡಲಾಗುವುದು. ಆದರೆ ಅಧಿಕೃತ ಪ್ರಕಟಣೆ ದಿನ ಏನು ಸಂಭವಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

'ಜಸ್ಪ್ರೀತ್ ಬುಮ್ರಾ ಬೆನ್ನುನೋವಿಗೆ ಒಳಗಾಗಿದ್ದು ಏಷ್ಯಾ ಕಪ್‌ನಲ್ಲಿ ಆಡುವುದಿಲ್ಲ. ಅವರು ನಮ್ಮ ಪ್ರಮುಖ ಬೌಲರ್ ಆಗಿದ್ದು ಟಿ20 ವಿಶ್ವಕಪ್‌ಗೆ ಮೊದಲು ಗುಣಮುಖರಾಗಲಿ ಎಂದು ನಾವು ಬಯಸುತ್ತೇವೆ. ಏಷ್ಯಾ ಕಪ್‌ನಲ್ಲಿ ನಾವು ಅವರನ್ನು ಅಪಾಯಕ್ಕೆ ಸಿಲುಕಿಸುವುದಕ್ಕೆ ಇಚ್ಛಿಸುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ಗಾಯವು ಉಲ್ಬಣಗೊಳ್ಳಬಹುದು ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಹಾಗೂ ಜಿಂಬಾಬ್ವೆ ವಿರುದ್ಧದ ಮುಂಬರುವ ಸರಣಿಯಿಂದ ವಿಶ್ರಾಂತಿ ಪಡೆಯುವ ಮೊದಲು ಬುಮ್ರಾ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಬಿಜೆಪಿ ಸಂಸದ ನೋಟಿಸ್; ಕಾರಣ ಏನು ಗೊತ್ತಾ?

ದೂರದರ್ಶನದ ಖ್ಯಾತ 'ನ್ಯೂಸ್ ಆಂಕರ್' ಸರಳ ಮಹೇಶ್ವರಿ ನಿಧನ!

ರಾಹುಲ್ ವಿರುದ್ಧ ಸರ್ಕಾರ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇಲ್ಲ, ಆದರೆ...

IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆ; ಪರಮೇಶ್ವರ ಜತೆ ಸಭೆ ಸಕಾರಾತ್ಮಕ- ಸರ್ಕಾರದ ಅಂಗಳದಲ್ಲಿ ಚೆಂಡು!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ; 'ಟ್ರ್ಯಾಪ್ ಡೀಲ್' ಎಂದು ಟೀಕೆ

SCROLL FOR NEXT