ಕ್ರಿಕೆಟ್

ಸರಣಿ ಸೋತರು ವೇಗವಾಗಿ 500 ಸಿಕ್ಸರ್ ಬಾರಿಸಿ ದಾಖಲೆ ಬರೆದ ರೋಹಿತ್ ಶರ್ಮಾ!

Vishwanath S

ಮೀರ್‌ಪುರ್‌: ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ಅಜೇಯ 51 ರನ್ ಗಳಿಸಿ 5 ಸಿಕ್ಸರ್‌ಗಳನ್ನು ಬಾರಿಸಿದರು. 

ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಭಾರತೀಯ ನಾಯಕ ಪಾತ್ರರಾದರು. ಈ ವೇಳೆ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗೇಲ್ 553 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ರೋಹಿತ್ ಶರ್ಮಾ 428ನೇ ಪಂದ್ಯಗಳಲ್ಲಿ 500ನೇ ಸಿಕ್ಸರ್ ಬಾರಿಸಿದ್ದರೆ ಕ್ರಿಸ್ ಗೇಯ್ಲ್ 447 ಪಂದ್ಯಗಳನ್ನು ತೆಗೆದುಕೊಂಡಿದ್ದರು. 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
ಕ್ರಿಸ್ ಗೇಲ್ - 553
ರೋಹಿತ್ ಶರ್ಮಾ - 502
ಶಾಹಿದ್ ಅಫ್ರಿದಿ - 476
ಬ್ರೆಂಡನ್ ಮೆಕಲಮ್ - 398

ರೋಹಿತ್ ಟೆಸ್ಟ್‌ನಲ್ಲಿ 64 ಮತ್ತು ಟಿ20ಯಲ್ಲಿ 182 ಸಿಕ್ಸರ್‌ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 238 ಇನ್ನಿಂಗ್ಸ್‌ಗಳಲ್ಲಿ 48ರ ಸರಾಸರಿಯಲ್ಲಿ 9454 ರನ್ ಗಳಿಸಿದ್ದಾರೆ. ಇದರಲ್ಲಿ 29 ಶತಕಗಳು ಮತ್ತು 46 ಅರ್ಧ ಶತಕಗಳು ಸೇರಿವೆ.

SCROLL FOR NEXT