ಕ್ರಿಕೆಟ್

Big Bash League: ಟಿ20 ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ದಾಖಲೆ: ಕೇವಲ 15 ರನ್ ಗಳಿಗೆ ಸಿಡ್ನಿ ಥಂಡರ್ ಆಲೌಟ್!

Srinivasamurthy VN

ಸಿಡ್ನಿ: ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ಕ್ರಿಕೆಟ್ ಇತಿಹಾಸದ ಅತ್ಯಂತ ಕೆಟ್ಟ ದಾಖಲೆಯೊಂದು ನಿರ್ಮಾಣವಾಗಿದ್ದು, ಕೇವಲ 15 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಟಿ20 (T20 Cricket) ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಕಡಿಮೆ ರನ್‌ಗಳಿಸಿದ ತಂಡ ಎಂಬ ಕುಖ್ಯಾತಿಗೆ ಸಿಡ್ನಿ ಥಂಡರ್ ಪಾತ್ರವಾಗಿದೆ.

ಹೌದು.. ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ(BBL) ಸಿಡ್ನಿ ಥಂಡರ್‌(Sydney Thunder) ಕೇವಲ 15 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಟಿ20 (T20 Cricket) ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಕಡಿಮೆ ರನ್‌ಗಳಿಸಿದ ತಂಡ ಎಂಬ ಕೆಟ್ಟ ದಾಖಲೆ ಬರೆದಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್‌(Adelaide Strikers) 9 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿತು. 140 ರನ್‌ಗಳ ಗುರಿಯನ್ನು ಪಡೆದ ಸಿಡ್ನಿ ತಂಡ 5.5 ಓವರ್‌ ಎದುರಿಸಿ 15 ರನ್‌ಗಳಿಗೆ ಆಲೌಟ್‌ ಆಗಿದೆ. 

ಆ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಈ ಹಿಂದೆ 2019ರ ಆಗಸ್ಚ್ 30ರಂದು ಜೆಕ್ ರಿಪಬ್ಲಿಕ್ ತಂಡದ ವಿರುದ್ಧ ಟರ್ಕಿ 8.3 ಓವರ್ ನಲ್ಲಿ 21 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಟಿ20 ಕ್ರಿಕೆಟ್ ಅತ್ಯಂತ ಕಳಪೆ ಮೊತ್ತವಾಗಿತ್ತು. ಇದೀಗ ಬಿಗ್ ಬ್ಯಾಷ್ ಲೀಗ್ ನಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್ ಗಳಿಗೆ ಆಲೌಟ್ ಆಗಿ ಈ ಕುಖ್ಯಾತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ. ಉಳಿದಂತೆ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ರಿನೆಗೇಡ್ಸ್ ತಂಡ ಮೆಲ್ಬೋರ್ನ್ ಸ್ಟಾರ್ಸ್ ತಂಡದ ವಿರುದ್ಧ 57ರನ್ ಗಳಿಗೆ ಆಲೌಟ್ ಆಗಿತ್ತು. ಇದು ಬಿಗ್ ಬ್ಯಾಷ್ ಇತಿಹಾಸದ ಕಳಪೆ ಮೊತ್ತವಾಗಿತ್ತು.

ಇನ್ನು 124 ರನ್‌ಗಳ ಭರ್ಜರಿ ಗೆಲುವು, 4.375 ನೆಟ್‌ ರನ್‌ ರೇಟ್‌ನೊಂದಿಗೆ ಅಡಿಲೇಡ್ ಸ್ಟ್ರೈಕರ್ಸ್‌ ಬಿಬಿಎಲ್‌ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
 

SCROLL FOR NEXT