ಆರ್ ಅಶ್ವಿನ್-ಶ್ರೇಯಸ್ ಅಯ್ಯರ್ ಜೋಡಿ 
ಕ್ರಿಕೆಟ್

2ನೇ ಟೆಸ್ಟ್: ಬಾಂಗ್ಲಾ ಕೈಯಿಂದ ಗೆಲುವು ಕಸಿದ ಅಶ್ವಿನ್, ಅಯ್ಯರ್, ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

ಢಾಕಾದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿದ್ದ ಬಾಂಗ್ಲಾದೇಶದಿಂದ ಭಾರತ ಗೆಲುವು ಕಸಿಯುವ ಮೂಲಕ 2ನೇ ಟೆಸ್ಟ್ ಪಂದ್ಯವನ್ನು 3 ವಿಕೆಟ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿದೆ. ಆ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

ಢಾಕಾ: ಢಾಕಾದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿದ್ದ ಬಾಂಗ್ಲಾದೇಶದಿಂದ ಭಾರತ ಗೆಲುವು ಕಸಿಯುವ ಮೂಲಕ 2ನೇ ಟೆಸ್ಟ್ ಪಂದ್ಯವನ್ನು 3 ವಿಕೆಟ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿದೆ. ಆ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

2ನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ ನೀಡಿದ 145ರನ್ ಗಳ ಅಲ್ಪ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಕೇವಲ 74 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸಂಕಷ್ಟಕ್ಕೆ ಸಿಲುಕಿತ್ತು. ಬಾಂಗ್ಲಾಪರ ಮೆಹ್ದಿ ಹಸನ್ ಮಿರಾಜ್ 5 ವಿಕೆಟ್ ಪಡೆದು ಭಾರತಕ್ಕೆ ಮಾರಕವಾಗಿ ಪರಿಣಮಿಸಿದ್ದರು. ಇನ್ನೇನು ಬಾಂಗ್ಲಾದೇಶ ಗೆಲುವು ಸಾಧಿಸುತ್ತದೆ ಎನ್ನುವಾಗಲೇ 8ನೇ ವಿಕೆಟ್ ಗೆ ಜೊತೆಯಾದ ಆರ್ ಆಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ ಮುರಿಯದ 8ನೇ ವಿಕೆಟಿಗೆ 105 ಎಸೆತಗಳಲ್ಲಿ 71 ರನ್‌ ಜೊತೆಯಾಟವಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಂತಿಮವಾಗಿ ಇಬ್ಬರ ಉತ್ತಮ ಜೊತೆಯಾಟದಿಂದ ಭಾರತ 47 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 145 ರನ್‌ ಹೊಡೆಯಿತು.

ಅಶ್ವಿನ್‌(Ashwin) ಮತ್ತು ಶ್ರೇಯಸ್‌ ಅಯ್ಯರ್‌(Shreyas Iyer) ಸಾಹಸದಿಂದ ಬಾಂಗ್ಲಾದೇಶದ(Bangladesh) ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ಭಾರತ(India) 3 ವಿಕೆಟ್‌ಗಳಿಂದ ಜಯಗಳಿಸಿ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.

ಮೂರನೇ ದಿನದಾಟಕ್ಕೆ 4 ವಿಕೆಟ್‌ ಕಳೆದುಕೊಂಡು 45 ರನ್‌ಗಳಿಸಿದ್ದ ಭಾರತ 29 ರನ್‌ ಸೇರಿಸಿ ಮೂರು ವಿಕೆಟ್‌ ಕಳೆದುಕೊಂಡಿತು. ಈ ಸಮಯದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಅಶ್ವಿನ್‌ ಜೊತೆಯಾದರು. ಶ್ರೇಯಸ್‌ ಅಯ್ಯರ್‌ 29 ರನ್‌(46 ಎಸೆತ, 4 ಬೌಂಡರಿ) ಹೊಡೆದರೆ ಅಶ್ವಿನ್‌ 42 ರನ್‌(62 ಎಸೆತ, 4 ಬೌಂಡರಿ, 1 ಸಿಕ್ಸರ್‌) ಬಾರಿಸಿದರು.

ಅಕ್ಷರ್‌ ಪಟೇಲ್‌ 34 ರನ್‌, ಜಯದೇವ್‌ ಉನಾದ್ಕತ್‌ 13, ರಿಷಭ್‌ ಪಂತ್‌ 9 ರನ್‌ ಗಳಿಸಿ ಔಟಾದರು. ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ 188 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಈ ಪಂದ್ಯದ ಗೆಲುವಿನ ಮೂಲಕ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 227
ಭಾರತ ಮೊದಲ ಇನ್ನಿಂಗ್ಸ್‌ 314
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ 231
ಭಾರತ ಎರಡನೇ ಇನ್ನಿಂಗ್ಸ್‌ 145

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT